ಸೋಮವಾರ, ಏಪ್ರಿಲ್ 28, 2025
HomeBreakingನೀ ಚುಚ್ಚಿದ್ದು ತೋಳಿಗಾ ಹೃದಯಕ್ಕಾ?! ಸೋಷಿಯಲ್ ಮೀಡಿಯಾದಲ್ಲಿ ಕೊರೋನಾ ವಾಕ್ಸಿನ್ ಕಾವ್ಯ…!!

ನೀ ಚುಚ್ಚಿದ್ದು ತೋಳಿಗಾ ಹೃದಯಕ್ಕಾ?! ಸೋಷಿಯಲ್ ಮೀಡಿಯಾದಲ್ಲಿ ಕೊರೋನಾ ವಾಕ್ಸಿನ್ ಕಾವ್ಯ…!!

- Advertisement -

ಕ್ಯಾಮರಾ ಕಣ್ಣಿಗೆ ಕಂಡಿದ್ದೆಲ್ಲವೂ ಕಾವ್ಯವೇ. ಕೊರೋನಾ ವಾಕ್ಸಿನ್ ಹೊತ್ತಿನಲ್ಲೂ ತೆಗೆದ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಒಂದು ಪೋಟೋಗೆ ನೊರೆಂಟು ಕವಿಮನಸ್ಸುಗಳು ಸುಂದರ ಕಮೆಂಟ್ ಬರೆದಿದ್ದರೇ, ಹತ್ತಾರು ಕವನಗಳು ಹುಟ್ಟಿವೆ.

ನರ್ಸ್ ಒಬ್ಬಳು ಯುವಕನೊರ್ವನಿಗೆ ಕೊರೋನಾ ಚುಚ್ಚುಮದ್ದು ನೀಡುತ್ತಿದ್ದಾಳೆ. ನರ್ಸ್ ಲಸಿಕೆ ನೀಡೋದ್ರಲ್ಲಿ ಬ್ಯುಸಿಯಾಗಿದ್ದರೇ, ಆ ಹುಡುಗ ಆಕೆಯ ಕಡೆಗೆ ಕದ್ದು ನೋಡಿದ್ದಾನೆ. ಯಾರೋ ಕ್ಲಿಕ್ಕಿಸಿದ  ಈ ಪೋಟೋ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.  

ಹೇಳಿಬಿಡು ಹುಡುಗಿ ನೀ ಚುಚ್ಚಿದ್ದು, ನನ್ನ ತೋಳಿಗೋ, ಹೃದಯಕ್ಕೋ ಎಂದು ಕೆಲವರು ಕ್ಯಾಪ್ಸನ್ ನೀಡಿ ಕೆಲವರು ಈ ಪೋಟೋ ಶೇರ್ ಮಾಡಿದ್ದರೇ, ಇನ್ನು ಕೆಲವರು ಅದು ಒಲವಿನ ಸೂಜಿಯೋ ಮೊಂಡಾದದ್ದೋ ಎಂದಿದ್ದಾರೆ.

ಇನ್ನು ಕೆಲವರು ಇದು ಕೊರೋನಾ ಲಸಿಕೆಯೋ , ಪ್ರೇಮದ ಚುಚ್ಚುಮದ್ದೋ ಎಂದು ಪ್ರಶ್ನಿಸಿದ್ದಾರೆ. ಕೆಲ ಪಡ್ಡೆಹೈಕಳು ಆಹಾ ಈ ನರ್ಸ್ ಕೈಯಲ್ಲಿ ಚುಚ್ಚಿಸಿಕೊಳ್ಳುವ ಭಾಗ್ಯ ನನಗಾದರೂ ಸಿಗಬಾರದಿತ್ತೇ ಎಂದು ಆಶಿಸಿದ್ದಾರೆ.

ಆದರೆ ಈ ನರ್ಸ್ ಯಾವ ಆಸ್ಪತ್ರೆಯವಳು, ಲಸಿಕೆ ಚುಚ್ಚಿಸಿಕೊಂಡವರು ಯಾರು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ವಿವರಣೆ ಮಾಹಿತಿ ಸಿಕ್ಕಿಲ್ಲ. ಕೇವಲ ಹುಡುಗರು ಮಾತ್ರವಲ್ಲ ಕೆಲ ಹುಡುಗಿಯರು ಆಹಾ ಈ ನೋಟ ಸಾಕು ಜನುಮಕೆ ಎಂದಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಲಸಿಕೆಯೊಂದರ ಪೋಟೋವೋ ಕಾವ್ಯ ಸೃಷ್ಟಿಯ ಸರಕಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

RELATED ARTICLES

Most Popular