ಭಾನುವಾರ, ಏಪ್ರಿಲ್ 27, 2025
HomeBreakingಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು...

ಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತೆ ಗೊತ್ತಾ ?

- Advertisement -

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ ದರ, ಚರ್ಮದ ಬ್ಯಾಕ್ಟೀರಿಯಾ ಮತ್ತು ಧರಿಸಿರುವ ಬಟ್ಟೆಗಳಂತಹ ಅನೇಕ ವಿಷ್ಯಗಳೊಂದಿಗೆ ಸಂಬಂಧ ಹೊಂದಿರುತ್ತದೆ.

ಸೊಳ್ಳೆಗಳು ಬೆವರು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಇಷ್ಟಪಡುತ್ತವೆ. ವ್ಯಾಯಾಮ ಅಥವಾ ವಾಕಿಂಗ್ ನಂತರ ಸ್ನಾನ ಮಾಡಬೇಕು. ನಿಮ್ಮ ದೇಹದಲ್ಲಿ ಬರುವ ಬೆವರು ಸೊಳ್ಳೆಯನ್ನು ಆಕರ್ಷಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಹೆಚ್ಚು ಮದ್ಯ ಸೇವಿಸುವ ಜನರು ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ.

ಇದನ್ನೂ ಓದಿ: ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ

ಚಯಾಪಚಯ ದರವು ನಿಮ್ಮ ದೇಹದಿಂದ ಬಿಡುಗಡೆಯಾದ ಕಾರ್ಬನ್ ಡೈಆಕ್ಸೈಡ್ ಅನ್ನು ನಿರ್ಧರಿಸುತ್ತದೆ. ಇದರ ಬಲವಾದ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಅಧ್ಯಯನದ ಪ್ರಕಾರ, ಗರ್ಭಿಣಿಯರು ಸಾಮಾನ್ಯ ಮನುಷ್ಯರಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಾರೆ. ಅದಕ್ಕಾಗಿಯೇ ಸೊಳ್ಳೆಗಳು ಅವರನ್ನು ಹೆಚ್ಚು ಕಚ್ಚುತ್ತವೆ.

ಇದನ್ನೂ ಓದಿ: ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು ! ಇಲ್ಲಿನ ಜನರ ಆಚರಣೆಯೇ ವಿಚಿತ್ರ

ಚರ್ಮದಲ್ಲಿ ಹಲವು ವಿಧದ ಬ್ಯಾಕ್ಟೀರಿಯಾಗಳಿವೆ. ಕೆಲವೊಮ್ಮೆ ಸೊಳ್ಳೆಗಳು ಇದರತ್ತ ಆಕರ್ಷಿತಗೊಂಡು ಕಚ್ಚುತ್ತವೆ. ಓ ರಕ್ತದ ಗುಂಪು ಹೊಂದಿರುವ ಜನರ ಕಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಇದರ ಹೊರತಾಗಿ ಎ ರಕ್ತದ ಗುಂಪು ಹೊಂದಿರುವ ಜನರಿಗೂ ಸೊಳ್ಳೆ ಹೆಚ್ಚು ಕಚ್ಚುತ್ತದೆ. ಬಟ್ಟೆಗಳ ಬಣ್ಣ ಸಹ ಸೊಳ್ಳೆಗಳನ್ನು ಆಕರ್ಷಿಸುತ್ತದೆ.

(Your blood group is also responsible for more mosquito bites! Do you know which blood group bites more mosquitoes?)

RELATED ARTICLES

Most Popular