ವಿಶಾಲ ಗಾಣಿಗ ಕೊಲೆ ಪ್ರಕರಣ : ಪೊಲೀಸರಿಗೆ 50 ಸಾವಿರ ಬಹುಮಾನ, ಅಭಿನಂದನೆ

ಉಡುಪಿ : ರಾಜ್ಯದ ಗಮನಸೆಳೆದಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್‌ ಠಾಣೆ ಸಮೀಪದ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರು. ಇದೀಗ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸುವ ಕಾರ್ಯ ನಡೆದಿದ್ದು, ನಗದು ಪುರಸ್ಕಾರವನ್ನು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರು ವಿತರಿಸಿದ್ದಾರೆ.

ಜುಲೈ 12ರಂದು ವಿಶಾಲ ಗಾಣಿಗ ಅವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ವಿಶಾಲ ಗಾಣಿಗ ಅವರ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಮೇಲ್ನೋಟಕ್ಕೆ ಸುಫಾರಿ ಕಿಲ್ಲರ್‌ಗಳ ಕೃತ್ಯ ಅನ್ನೋದು ಪೊಲೀಸರಿಗೆ ಖಚಿತವಾಗಿತ್ತು. ಅಲ್ಲದೇ ಆರೋಪಿಗಳು ಸಾಕಷ್ಟು ಪ್ಲ್ಯಾನ್‌ ಮಾಡಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ನಂತರದಲ್ಲಿ ವಿಶಾಲ ಗಾಣಿಗ ಅವರ ರಾಮಕೃಷ್ಣ ಗಾಣಿಗ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಲೇ ಕೊಲೆ ಪ್ರಕರಣ ಬಯಲಾಗಿತ್ತು.

ವಿಶಾಲ ಗಾಣಿಗ ಕೊಲೆ ಪ್ರಕರಣ ಕರಾವಳಿ ಭಾಗದ ಜನರನ್ನು ಬೆಚ್ಚಿ ಬೀಳಿಸಿತ್ತು. ಆದರೆ ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಪ್ರಕರಣದ ತನಿಖೆಗೆ ನಾಲ್ಕು ತಂಡ ರಚಿಸಿದ್ದರು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಸ್ವಾಮಿನಾಥನ್ ನಿಶಾದ್ ಎಂಬಾತನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣ ನಡೆದ ಕೆಲವೇ ಗಂಟೆಗಳ ಅವಧಿಯಲ್ಲಿ ಕೊಲೆ ಪ್ರಕರಣ ಬೇಧಿಸಿದ ಉಡುಪಿ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ : ಡಾರ್ಲಿಂಗ್..‌ ಡಾರ್ಲಿಂಗ್‌ ಅನ್ನುತ್ತಲೇ ಕೊಲೆಗೈದ : ಅಕ್ರಮ ಸಂಬಂಧಕ್ಕೆ ವಿಶಾಲಾ ಗಾಣಿಗ ಹತ್ಯೆ ..!!!

ಇನ್ನು ಪ್ರಕರಣವನ್ನು ಭೇದಿಸಿದ ಅಧಿಕಾರಿ, ಸಿಬ್ಬಂದಿ ತಂಡಕ್ಕೆ ರಾಜ್ಯದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು. ಅದರಂತೆ ಇಂದು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ತಂಡದ ಸದಸ್ಯರಿಗೆ ನಗದು ಪುರಸ್ಕಾರ ವಿತರಿಸಿದ್ದಾರೆ.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆಗೆ 6 ತಿಂಗಳ ಹಿಂದೆ ಸ್ಕೆಚ್‌ : ಹಣದ ಪಾರ್ಸೆಲ್‌ ಕಳುಹಿಸಿ ಕೊಲೆ ಮಾಡಿಸಿದ ಪತಿ

ಎಸ್‍ಪಿ ವಿಷ್ಣುವರ್ಧನ್, ಎಎಸ್‍ಪಿ ಕುಮಾರ ಚಂದ್ರ, ಡಿವೈಎಸ್‍ಪಿ ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಪಿಐ ಮಂಜುನಾಥ ಗೌಡ, ಮಲ್ಪೆ ಸಿಪಿಐ ಶರಣ್ ಗೌಡ, ಕಾರ್ಕಳ ಸಿಪಿಐ ಸಂಪತ್ ಕುಮಾರ್, ಪಿಎಸ್‍ಐ ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿ ಶಿವಾನಂದ, ದಿನೇಶ್, ನಿತಿನ್ ಅವರನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ : ಯುವತಿಯ ಮದುವೆ ತಪ್ಪಿಸಲು ಅಶ್ಲೀಲ ವಿಡಿಯೋ ಹರಿಬಿಟ್ಟ ಕಿರಾತಕರು : ನಾಲ್ವರು ಅರೆಸ್ಟ್‌

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪತಿ, ಸೇರಿ ಸುಫಾರಿ ಕಿಲ್ಲರ್‌ ಬಂಧನ : ದುಬೈನಲ್ಲೇ ಕುಳಿತು ಕೊಲೆಗೆ ಸ್ಕೆಚ್‌

( Vishala Ganiga Murder Case, 50 thousand reward for Udupi police, congratulations )

Comments are closed.