ಬೆಂಗಳೂರು : ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಜೂನ್ 14 ರಿಂದ 25 ರವೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ವೇಳಾಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಬಹುದಾಗಿ. ಫೆಬ್ರವರಿ 26ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನ ನೀಡಲಾಗಿದ್ದು, ಎಸ್ಎಸ್ಎಲ್ ಸಿ ಬೋರ್ಡ್ ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಪರೀಕ್ಷೆಯ ವೇಳಾಪಟ್ಟಿ :
ಜೂನ್ 14 ಪ್ರಥಮ ಭಾಷೆ, ಜೂನ್ 16 ಗಣಿತ, ಜೂನ್ 18 ದ್ವಿತೀಯ ಭಾಷೆ, ಜೂನ್ 21 ವಿಜ್ಞಾನ, ಜೂನ್ 23 ತೃತೀಯ ಭಾಷೆ, ಜೂನ್ 25 ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಪ್ರಥಮ ಭಾಷೆ ಹಾಗೂ ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪರೀಕ್ಷೆಗೆ 3/15 ಗಂಟೆಗಳ ಕಾಲವಕಾಶವನ್ನ ನೀಡಲಾಗುತ್ತಿದ್ದು, ದ್ವಿತೀಯ ಹಾಗೂ ತೃತೀಯ ಭಾಷೆಗೆ 3 ಗಂಟೆಗಳ ಸಮಯವನ್ನು ನಿಗದಿ ಪಡಿಸಲಾಗಿದೆ.