ಪೊಗರು ಬೆನ್ನಲ್ಲೇ ಪುಷ್ಪ ರಿಲೀಸ್ ಡೇಟ್ ಅನೌನ್ಸ್….! ನ್ಯಾಷನಲ್ ಕ್ರಶ್ ರಶ್ಮಿಕಾಗೆ ಡಬಲ್ ಧಮಾಕಾ…!!

ಕೊರೋನಾ ಹಿನ್ನೆಲೆಯಲ್ಲಿ ತೆರೆಗೆ ಬರದೇ ಉಳಿದಿದ್ದ ಎಲ್ಲ ಬಿಗ್ ಸ್ಟಾರ್ ಸಿನಿಮಾಗಳು ಒಂದೊಂದಾಗೇ ತೆರೆ ಕಾಣುತ್ತಿವೆ. ಕೊಡಗಿನ ಕುವರಿ ರಶ್ಮಿಕಾ ಅಭಿನಯದ ಎರಡೆರಡು ಸಿನಿಮಾಗಳ ರಿಲೀಸ್ ಡೇಟ್ ಫೈನಲ್ ಆಗಿದ್ದು, ರಶ್ಮಿಕಾ ಈ ಖುಷಿ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಸಧ್ಯಕ್ಕೆ ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಕೊನೆಯ ಚಿತ್ರ ಪೊಗರು. ಪೊಗರು ಚಿತ್ರ ತೆರೆಗೆ ಬರಲು  ಫೆ.೧೯ ರ ದಿನಾಂಕ ನಿಗದಿಯಾಗಿದೆ. ಪೊಗರು ಚಿತ್ರದಲ್ಲಿ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರ ತೆಲುಗು,ತಮಿಳಿನಲ್ಲೂ ರಿಲೀಸ್ ಆಗಲಿದೆ.

ಪೊಗರು ಜೊತೆಯಲ್ಲೇ  ರಶ್ಮಿಕಾ ಕನ್ನಡಸಿನಿ‌ ಜರ್ನಿಯಿಂದ ಅಂತರ ಕಾಯ್ದುಕೊಂಡಿದ್ದು , ಬಹುತೇಕ ಪರಭಾಷಾ ಸಿನಿಮಾದಲ್ಲೇ  ಬ್ಯುಸಿಯಾಗಿದ್ದಾರೆ.  ಈ ಮಧ್ಯೆ ರಶ್ಮಿಕಾ ಅಲ್ಲೂ ಅರ್ಜುನ್ ಜೋಡಿಯಾಗಿರುವ ಪುಷ್ಪ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದ್ದು, ಈಗಲೇ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿ‌ ಅಚ್ಚರಿ ಮೂಡಿಸಿದೆ.

 2021 ರ ಅಗಸ್ಟ್ 13 ರಂದು ಪುಷ್ಪ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿಯ ಆರ್.ಅರ್.ಆರ್ ಚಿತ್ರದ ರಿಲೀಸ್ ಡೇಟ್ ಫೈನಲ್ ಆಗಿದ್ದು ಆದರೆ ಅದೇ ದಿನ ಬಾಲಿವುಡ್ ನ ಮೈದಾನ್ ಕೂಡ ತೆರೆಗೆ ಬರಲಿದೆ. ಹೀಗಾಗಿ ಎರಡು ಚಿತ್ರದಲ್ಲೂ ಅಜಯ್ ದೇವಗನ್  ಅಭಿನಯವಿರೋದರಿಂದ ಚಿತ್ರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಗಮನಿಸಿದ ಪುಷ್ಪ ತಂಡ  ಚಿತ್ರೀಕರಣ ಪೂರ್ತಿಗೊಳ್ಳುವ ಮುನ್ನವೇ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಈ ಚಿತ್ರದಲ್ಲಿ ಟಗರು ಖ್ಯಾತಿಯ ಡಾಲಿ ಧನಂಜಯ್ ನಟಿಸಲಿದ್ದು, ವಿಲನ್ ರೋಲ್ ಗಾಗಿ‌ ಸಿದ್ಧತೆ ನಡೆಸಿದ್ದಾರೆ. ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಫುಲ್ ಖುಷಿಯಾಗಿರುವ ರಶ್ಮಿಕಾ ಮಂದಣ್ಣ ಅದನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ಸುಕುಮಾರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ಪುಷ್ಪ ಚಿತ್ರಕ್ಕಾಗಿ ಅಲ್ಲೂ ಅರ್ಜುನ್ ಗೆ ಜೋಡಿಯಾಗಿರುವ ನಟಿ ರಶ್ಮಿಕಾ ಮಂದಣ್ಣ  ಈ ಚಿತ್ರಕ್ಕಾಗಿ ಗ್ರಾಮೀಣ ಸೊಗಡಿನ ತೆಲುಗು ಕಲಿಯುವ ಸರ್ಕಸ್ ಕೂಡ ನಡೆಸಿದ್ದರು. ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಅದ್ದೂರಿ ತಾರಾಗಣವಿರೋ ಚಿತ್ರ ಅಗಸ್ಟ್ ನಲ್ಲಿ ರಿಲೀಸ್ ಆಗಲಿದೆ.

Comments are closed.