ನಟಿ ಹಾಗೂ ಮಾಡೆಲ್ ಹಾಗೂ ಸಾಫ್ಟವೇರ್ ಇಂಜೀನಿಯರ್ ಹೀಗೆ ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ನಟಿ ಸನಮ್ ಶೆಟ್ಟಿ ಸಖತ್ ಹಾಟ್ ಪೋಟೋಗಳ ಜೊತೆ ಗಮನ ಸೆಳೆದಿದ್ದಾರೆ.

ಬೆಂಗಳೂರು ಮೂಲದ ತುಳು ಹಾಗೂ ತಮಿಳು ಪೋಷಕರ ಮುದ್ದಿನ ಮಗಳು ಸನಮ್ ಶೆಟ್ಟಿ ಬೆಂಗಳೂರಿನಲ್ಲಿ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆದಿದ್ದು, ಸಾಫ್ಟ್ವೇರ್ ಇಂಜೀನಿಯರ್ ಆಗಿ ವೃತ್ತಿ ಆರಂಭಿಸಿದ್ದರು.

ಬಳಿಕ ಫ್ಯಾಶನ್ ಲೋಕಕ್ಕೆ ಎಂಟ್ರಿಕೊಟ್ಟ ಸನಮ್ ಶೆಟ್ಟಿ ಈಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2012 ರಲ್ಲಿ ಅಂಬುಲಿ ಎಂಬ ತಮಿಳು ಹಾಗೂ ಸಿನಿಮಾ ಕಂಪನಿ ಎಂಬ ಮಲೆಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಗಾಗಲೇ 20 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.

ಕೇವಲ ಸಿನಿಮಾ ಮಾತ್ರವಲ್ಲ ವೆಬ್ ಸೀರಿಸ್ ಗಳಿಗಾಗಿಯೂ ಸನಮ್ ಶೆಟ್ಟಿ ನಟಿಸಿದ್ದಾರೆ. 2016 ರಲ್ಲಿ ಮಿಸ್ ಸೌತ್ ಇಂಡಿಯಾ ಕಿರೀಟ್ ಗೆದ್ದ ಸನಮ್ ಶೆಟ್ಟಿ ತಮ್ಮ ಮಾದಕ ಸೌಂದರ್ಯದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

2018 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಅಥರ್ವ್ ದಲ್ಲೂ ಸನಮ್ ಶೆಟ್ಟಿ ನಟಿಸಿದ್ದಾರೆ.

ನಟ ತರ್ಶನ್ ತ್ಯಾಜರಾಜ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸನಮ್ ಶೆಟ್ಟಿ ಬಳಿಕ ವಿವಾಹ ಮುರಿದುಕೊಂಡಿದ್ದು, ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.

ಸದ್ಯ ಸನಮ್ ಶೆಟ್ಟಿ ಹೊಸ ಪೋಟೋಶೂಟ್ ಗಳು ಸಖತ್ ಸದ್ದು ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
