ಸದಾ ಒಬ್ಬರಲ್ಲ ಒಬ್ಬರ ಕಾಲೆಳೆಯುವ ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ಕಂಗನಾ ಈ ಭಾರಿ ತಮ್ಮ ಸಿನಿಮಾ ಸುದ್ದಿಯ ಜೊತೆ ಹಾಜರಾಗಿದ್ದು ಹೊಸ ಲುಕ್ ಪೋಟೋ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ತಮಿಳುನಾಡಿನ ಮಾಜಿಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ತಲೈವಾ ಚಿತ್ರದಲ್ಲಿ ಜಯಲಲಿತಾ ಪಾತ್ರದಲ್ಲಿ ನಟಿಸಿರುವ ಕಂಗನಾ ಪಾತ್ರಕ್ಕಾಗಿ ಬರೋಬ್ಬರಿ ೨೦ ಕೆಜಿ ಹೆಚ್ಚಿಸಿಕೊಂಡಿದ್ದಾರಂತೆ.

ಕಂಗನಾ ಹಂಚಿಕೊಂಡ ಪೋಟೋಗಳಲ್ಲಿ ತೂಕ ಹೆಚ್ಚಿಸಿಕೊಂಡಿದ್ದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ತೆಳ್ಳಗಿನ ಬಳ್ಳಿಯಂತಿದ್ದ ಕಂಗನಾ ಈಗ ಮೈಕೈತುಂಬಿಕೊಂಡು ಜ್ಯೂನಿಯರ್ ಜಯಲಲಿತಾ ತರ ಕಾಣಿಸಿದ್ದಾರೆ.

ನಟಿಯಾಗಿ ಹಾಗೂ ಪ್ರಬುದ್ಧ ರಾಜಕಾರಣಿಯಾಗಿ ಬದುಕಿದ್ದ ಜಯಲಲಿತಾ ಬದುಕಿನ ಎರಡು ಪಾತ್ರಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹೀಗಾಗಿ ಪಾತ್ರಕ್ಕೆ ನ್ಯಾಯ ಒದಗಿಸಲು ಕಂಗನಾ ಒಂದೇಚಿತ್ರದಲ್ಲಿ ೨೦ ಕೆಜಿ ತೂಕ ಏರಿಸಿಕೊಂಡು ಹಾಗೂ ಇಳಿಸಿಕೊಂಡು ನಟಿಸಿದ್ದಾರೆ.
ಮಾರ್ಚ್ ೨೩ ರಂದು ಬಹುನೀರಿಕ್ಷಿತ ತಲೈವಿ ಚಿತ್ರದ ಟ್ರೇಲರ್ ಲಾಂಚ್ ಆಗಲಿದ್ದು ತಮಿಳುನಾಡಿನಲ್ಲಿ ಸಖತ್ ಕುತೂಹಲ ಮೂಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರೋ ಕಂಗನಾ, ತಲೈವಿ ಟ್ರೇಲರ್‌ಲಾಂಚ್ ಗೆ ಒಂದು ದಿನ ಮಾತ್ರ ಬಾಕಿ ಇದೆ. ಈ ಬಯೋಪಿಕ್ ಸಂದರ್ಭದಲ್ಲಿ ಒಮ್ಮೆ ತೂಕ ಏರಿಸಿಕೊಂಡು ಮತ್ತೆ ಇಳಿಸಿಕೊಂಡು ನಟಿಸುವ ಸಂದರ್ಭ ಇದಾಗಿತ್ತು. ಇನ್ನೇನು ಕೆಲವೆ ಗಂಟೆಗಳಲ್ಲಿ ಜಯಲಲಿತಾ ಪಾತ್ರ ನಿಮ್ಮೆದುರು ಬರಲಿದೆ ಎಂದಿದ್ದಾರೆ.