ಸೋಮವಾರ, ಏಪ್ರಿಲ್ 28, 2025
HomeBreakingತಮಿಳುನಾಡಿನಲ್ಲಿ ರಂಗೇರಿದ ಚುನಾವಣಾ ಪ್ರಚಾರ….! ಮತಬೇಟೆಯ ವೇಳೆ ಮಹಿಳೆಗೆ ಬಟ್ಟೆ-ಪಾತ್ರೆ ತೊಳೆದುಕೊಟ್ಟ ಅಭ್ಯರ್ಥಿ…!!

ತಮಿಳುನಾಡಿನಲ್ಲಿ ರಂಗೇರಿದ ಚುನಾವಣಾ ಪ್ರಚಾರ….! ಮತಬೇಟೆಯ ವೇಳೆ ಮಹಿಳೆಗೆ ಬಟ್ಟೆ-ಪಾತ್ರೆ ತೊಳೆದುಕೊಟ್ಟ ಅಭ್ಯರ್ಥಿ…!!

- Advertisement -

ಚುನಾವಣೆ ಬಂದಾಗ ಮತದಾರರನ್ನು ಸೆಳೆಯೋಕೆ ರಾಜಕಾರಣಿಗಳು ಏನು ಬೇಕಾದರೂ ಮಾಡ್ತಾರೆ. ಇದಕ್ಕೆ ತಾಜಾ ಉದಾಹರಣೆ ತಮಿಳುನಾಡಿದ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನಾಯಕರೊಬ್ಬರು ಮತದಾರರ ಬಟ್ಟೆ ಒಗೆದು ಮತಯಾಚನೆ ಮಾಡಿದ್ದಾರೆ.

ತಮಿಳುನಾಡಿನ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ತಂಗಾ ಕಾತಿರಾವನ್ ಮತಯಾಚನೆಯ ವೇಳೆ ಮಹಿಳೆಯೊಬ್ಬಳಿಗೆ ಬಟ್ಟೆ ಒಗೆದು ಕೊಡುವ ಮೂಲಕ ತಮಗೆ ಮತ ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲ ಒಂದೊಮ್ಮೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೇ ಜನರಿಗೆ ವಾಷಿಂಗ್ ಮೆಶಿನ್ ವಿತರಿಸುವ ತಮ್ಮ ಪ್ರಣಾಳಿಕೆಯ ಅಂಶವನ್ನು ನೆನಪಿಸುವ ಪ್ರಯತ್ನ ಇದು ಎಂದು ತಂಗಾ ಕಾತಿರಾವನ್ ಹೇಳಿದ್ದಾರೆ.

ಎಐಎಡಿಎಂಕೆ ತಂಗಾ ನಾಗೋರ್ ಬಳಿ ಮನೆ ಮನೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ವಂಡಿಪೇಟ್ಟೈನಲ್ಲಿ ಮಹಿಳೆಯೊಬ್ಬರು ಮನೆಯ ಬಳಿ ಬಟ್ಟೆ ತೊಳೆಯುತ್ತಿದ್ದರು. ಇದನ್ನು ನೋಡಿದ ತಂಗಾ ಬಟ್ಟೆ ತೊಳೆದು ಕೊಡಲು ಮುಂದಾಗಿದ್ದಾರೆ.

ಮೊದಲು ನಿರಾಕರಿಸಿದ ಮಹಿಳೆ ಬಳಿಕ ತಂಗಾ ಅವರಿಗೆ ತೊಳೆಯಲು ಕೆಲ ಬಟ್ಟೆ ನೀಡಿದ್ದಾರೆ. ತಂಗಾ ಕೇವಲ ಬಟ್ಟೆ ತೊಳೆದಿದ್ದು ಮಾತ್ರವಲ್ಲದೇ ಪಕ್ಕದಲ್ಲೇ ಇದ್ದ ಪಾತ್ರೆಗಳನ್ನು ತೊಳೆದು ಇಡುವ ಮೂಲಕ ಜನರು ಹಾಗೂ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದ್ದಾರೆ.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ತಂಗಾ ನಮ್ಮ ಸರ್ಕಾರ ಮಹಿಳೆಯರಿಗೆ ಪಾತ್ರೆ ಹಾಗೂ ಬಟ್ಟೆ ತೊಳೆಯುವ ಯಂತ್ರ‌ ನೀಡುವ ಭರವಸೆ ನೀಡಿದೆ. ಅದನ್ನು ನೆನಪಿಸಲು ನಾನು ಪಾತ್ರೆ-ಬಟ್ಟೆ ತೊಳೆದು ಮತಯಾಚಿಸಿದ್ದೇನೆ ಎಂದಿದ್ದಾರೆ.
ತಂಗಾ ಪಾತ್ರೆ‌ ಬಟ್ಟೆ ತೊಳೆಯುವ ವಿಡಿಯೋ ದೇಶದಾದ್ಯಂತ ಸೋಷಿಯಲ್ ಮೀಡಿಯಾ ದಲ್ಲಿ ಸಂಚಲನ‌ ಮೂಡಿಸಿದೆ.

RELATED ARTICLES

Most Popular