ಬ್ಯಾಂಕ್ ಮ್ಯಾನೇಜರ್ ಮಹಿಳೆಗೆ ಅಶ್ಲೀಲ ಸಂದೇಶ : ಕಾಂಗ್ರೆಸ್ ಮುಖಂಡ ಅರೆಸ್ಟ್

ಡೆಹ್ರಾಡೂನ್ : ಬ್ಯಾಂಕ್ ಮ್ಯಾನೇಜರ್ ಮಹಿಳೆಯೋರ್ವರಿಗೆ ವಾಟ್ಸಾಪ್ ಸಂಭಾಷಣೆಯ ವೇಳೆಯಲ್ಲಿ ಅಶೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಾಖಂಡ್ ನ ಕಾಂಗ್ರೆಸ್ ಮುಖಂಡ ಅಜಾದ್ ಆಲಿ ಎಂಬವರೇ ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ ಸಂದೇಶ ಕಳುಹಿಸಿದಾತ. ವಿಮಾ ಪಾಲಿಸಿ ಮಾಡುವುದಾಗಿ ಅಜಾದ್ ಆಲಿ ಬ್ಯಾಂಕ್ ಮ್ಯಾಜನೇರ್ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ವಾಟ್ಸಾಪ್ ನಲ್ಲಿ ಸಂಭಾಷಣೆ ನಡೆಸುತ್ತಿದ. ಈ ವೇಳೆಯಲ್ಲಿ ಅಶ್ಲೀಲ ಸಂದೇಶ ಕಳುಹಿಸಲಾಗಿದೆ ಎಂದು ಆರೋಪಿಸಿ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೆರೆಗೆ ಕೊಟ್ವಾಲಿ ಠಾಣೆಯ ಪೊಲೀಸರು ಅಜಾದ್ ಆಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.ಇನ್ನು ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಅಜಾದ್ ಆಲಿ ಬಂಧನವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತ್ತು ಮಾಡಿದೆ ಎಂದು ಉತ್ತರಾಖಂಡ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯ್ ಸರಸ್ವತ್ ತಿಳಿಸಿದ್ದಾರೆ.

https://kannada.newsnext.live/puttur-gejjegiri-sridhara-poojai-illigal-house/

Comments are closed.