ತಮಿಳುನಾಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲೆಡೆಯೂ ಚುನಾವಣೆ ಮತದಾನ ಹಾಗೂ ಮತ ಎಣಿಕೆ ಬಳಿಕ ಇವಿಎಂ ಯಂತ್ರದ ವಿರುದ್ಧ ಅಸಮಧಾನ ಎದುರಾದ್ರೇ ತಮಿಳುನಾಡಿನಲ್ಲಿ ಚುನಾವಣೆಗೂ ಮುನ್ನವೇ ಪ್ರಶ್ನೆ ಎದ್ದಿದೆ.

ಪ್ರಸಕ್ತ ೨೦೨೧ ರ ವಿಧಾನಸಭಾ ಚುನಾವಣೆಯಲ್ಲಿ ೧೫ ವರ್ಷಕ್ಕೂ ಹಳೆಯದಾದ ಇವಿಎಂ ಯಂತ್ರಗಳನ್ನು ಬಳಸದಂತೆ ಸೂಚನೆ ನೀಡಲು ಹೈಕೋರ್ಟಗೆ ಡಿಎಂಕೆ ಮನವಿ ಮಾಡಿದೆ.
ದ್ರಾವಿಡ್ ಮುನ್ನೇತ್ರ ಕಳಗಂ ಚುನಾವಣೆಯಲ್ಲಿ ಹಳೆಯ ಇವಿಎಂ ಯಂತ್ರಗಳನ್ನು ಬಳಸಬಾರದು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಇದಲ್ಲದೇ , ಮತದಾನದ ವೇಳೆ ಎಲ್ಲ ಓಟಿಂಗ್ ಸೆಂಟರ್‌ನಲ್ಲಿ ಸಿಸಿಟಿವಿ ಕವರೇಜ್,ವೆಬ್ ಸ್ಟ್ರೀಮ್ ವ್ಯವಸ್ಥೆ ಕಲ್ಪಿಸಬೇಕು. ಇವಿಎಂ ಯಂತ್ರಗಳನ್ನು ಸಂಗ್ರಹಿಸಲಾದ ಸ್ಥಳದಲ್ಲಿ ಸಿಸಿಟಿವಿ ಕವರೇಜ್ ಇರಬೇಕು ಮತ್ತು ಮತ ಏಣಿಕೆಕೇಂದ್ರದಲ್ಲಿ ಜಾಮರ್‌ಅಳವಡಿಸಬೇಕೆಂದು ಮನವಿಮಾಡಿದೆ.

ಡಿಎಂಕೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಸೇಂದಿಲ್ ಕುಮಾರ್ ಹಾಗೂ ರಾಮಮೂರ್ತಿ ವಿಚಾರಣೆ ನಡೆಸಿದ್ದು ಮಾರ್ಚ್ ೨೯ರೊಳಗೆ ಉತ್ತರಿಸುವಂತೆ ಆಯೋಗಕ್ಕೆ ಸೂಚಿಸಿದ್ದಾರೆ.

ಅಲ್ಲದೇ ಆಯೋಗಕ್ಕೆ ಎಲ್ಲ ಪಕ್ಷಗಳ ಸಭೆ ಕರೆದು ಸೂಕ್ಷ್ಮ ಬೂತ್ ಗಳನ್ನು ಗುರುತಿಸಿ ಅಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ವಿಡಿಯೋ ಗ್ರಫಿ ಮಾಡಲು ಸೂಚಿಸಿದೆ. ಅಲ್ಲದೇ ಮತದಾನದಿಂದ ೧೫ ವರ್ಷ ತುಂಬಿದ ಮೆಶಿನ್ ಗಳನ್ನು ಅಳವಡಿಸದಿರಲು ಸಾಧ್ಯವೇ ಎಂದು ಪ್ರಶ್ನಿಸಿದೆ.