ಸಿಡಿ ಲೇಡಿಯ ಎರಡನೇ ವಿಡಿಯೋ ರಿಲೀಸ್ : ತಂದೆ ತಾಯಿಯ ಹೇಳಿಕೆ ವಿರುದ್ದವೇ ಉಲ್ಟಾ ಹೊಡೆದ ಯುವತಿ..!!

ಬೆಂಗಳೂರು : ಮಾಜಿ ಸಚಿವರ ರಾಸಲೀಲೆ ಸಿಡಿಯಲ್ಲಿರುವ ಯುವತಿ ಇದೀಗ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. ವಿಡಿಯೋದಲ್ಲಿ ತಂದೆ ತಾಯಿಯ ಹೇಳಿಕೆಯ ವಿರುದ್ದವೇ ಉಲ್ಟಾ ಹೊಡೆದಿದ್ದ, ತಂದೆ ತಾಯಿಗೆ ರಕ್ಷಣೆ ನೀಡಬೇಕು ಎಂದಿದ್ದಾಳೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದ ಸಿಡಿ ಲೇಡಿ. ತನಗೆ ಆಮಿಷವೊಡ್ಡಿ ಮಾಜಿ ತನ್ನನ್ನು ಬಳಸಿಕೊಂಡಿದ್ದಾರೆ. ಸಿಡಿ ಬಿಡುಗಡೆಯನ್ನು ರಮೇಶ್ ಜಾರಕಿಹೊಳಿ ಅವರೇ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದಳು. ಇದೀಗ ಯುವತಿ ಎರಡನೇ ವಿಡಿಯೋವನ್ನು ರಿಲೀಸ್ ಮಾಡಿದ್ದು, ನಾನು ಮಾರ್ಚ್ 12ರಂದೇ ನಾನು ಎಸ್ಐಟಿಗೆ ದೂರು ನೀಡಿದ್ದೇನೆ. ನಾನು ಈಗಾಗಲೇ ಎಸ್ ಐಟಿ ಮುಂದೆ ಹಾಜರಾಗುವುದಿಲ್ಲ. ನನ್ನ ತಂದೆ ತಾಯಿ ಸೇಫ್ ಆಗಿದ್ದಾರೆಂದು ತಿಳಿದ ನಂತರದ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾಳೆ.

https://kannada.newsnext.live/cd-lady-allegation-sit-cd-case-video/

ಸಿದ್ದರಾಮಯ್ಯ, ಡಿಕೆಶಿ, ರಮೇಶ್ ಕುಮಾರ್ ಹಾಗೂ ಮಹಿಳಾ ಸಂಘಟನೆಯವರು ನನ್ನ ತಂದೆ ತಾಯಿಯವರಿಗೆ ರಕ್ಷಣೆಯನ್ನು ನೀಡಿ ಎಂದು ಮನವಿ ಮಾಡಿದ್ದಾಳೆ. ನನ್ನ ತಂದೆ ಸ್ವ ಇಚ್ಚೆಯಿಂದ ದೂರು ಕೊಟ್ಟಿಲ್ಲ. ಅವರ ಮಗಳು ತಪ್ಪೇ ಮಾಡಿಲ್ಲ ಅನ್ನೋದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಹೆದರುವ ಅವಶ್ಯಕತೆಯಿಲ್ಲ ಎಂದಿದ್ದಾಳೆ.

Comments are closed.