ಪಾಟ್ನಾ : ಬಾಲಕಿಯೋರ್ವರಿಗೆ ಟ್ಯೂಷನ್ ನೀಡುವ ವೇಳೆಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು 22 ವರ್ಷದ ಶಿಕ್ಷಕಿಯೋರ್ವರನ್ನು ಕಿಡ್ನಾಪ್ ಮಾಡಿದ ಘಟನೆ ಪಾಟ್ನಾದಲ್ಲಿ ನಡೆದಿದೆ.
ನೆರೆ ಮನೆಯ ಬಾಲಕಿಗೆ ಶಿಕ್ಷಕಿ ಟ್ಯೂಷನ್ ನೀಡುತ್ತಿದ್ದರು. ಈ ವೇಳೆಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಶಿಕ್ಷಕಿಯನ್ನು ಅಪಹರಿಸಲು ಮುಂದಾಗಿದ್ದಾರೆ. ಮನೆಯವರು ದುಷ್ಕರ್ಮಿಗಳನ್ನು ತಡೆಯಲು ಮುಂದಾಗಿದ್ದಾರೆ. ಆದರೆ ದುಷ್ಕರ್ಮಿಗಳು 5 ರಿಂದ 6 ಬಾರಿ ಗುಂಡು ಹಾರಿಸಿ, ಶಿಕ್ಷಕನ್ನು ಕಿಡ್ನಾಪ್ ಮಾಡಿದ್ದಾರೆ.
ಶಿಕ್ಷಕಿಯನ್ನು ದುಷ್ಕರ್ಮಿಗಳು ಅಪಹರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ ಯಾವ ಕಾರಣಕ್ಕೆ ಅಪಹರಣ ಮಾಡಲಾಗಿದೆ ಅನ್ನೋ ಕುರಿತು ಮಾಹಿತಿ ಲಭ್ಯವಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.