ಟೆಕ್ಸಾಸ್: ಜನರಿಗೆ ದಾಖಲೆಗಳನ್ನು ಬರೆಯೋದಿಕ್ಕೆ ಹೊಸ ಹೊಸ ಸಾಧನೆಯ ಅಗತ್ಯವಿದ್ದರೇ ಈ ಮಹಿಳೆ ಮಾತ್ರ ಬೆರಳ ತುದಿಯ ಉಗುರುನಿಂದಲೇ ಹೊಸ ದಾಖಲೆ ಬರೆದರು. ಈಗ ಉಗುರಿನಿಂದ ವಿಶ್ವದಾಖಲೆ ಬರೆದು 30 ವರ್ಷದ ಬಳಿಕ ನೇಲ್ ಗೆ ಕತ್ತರಿಹಾಕಿ ಸುದ್ದಿಯಾಗಿದ್ದಾರೆ ಆಯನ್ನಾ ವಿಲಿಯಮ್ಸ್.

ಎರಡು ಬೆರಳುಗಳ ತುದಿಯಲ್ಲಿ ಉದ್ದಕೆ ಉಗುರು ಬೆಳೆಸಿ ದಾಖಲೆ ಬರೆದಿದ್ದ ಆಯನ್ನಾ ವಿಲಿಯಮ್ಸ್ ಕೊನೆಗೂ ಜಡೆಯಂತೆ ಬೆಳೆದು ನಿಂತಿದ್ದ ನಖಗಳಿಗೆ ಮುಕ್ತಿ ನೀಡಿದ್ದಾರೆ.

ಬಾಲ್ಯದಿಂದಲೂ ಉಗುರು ಬೆಳೆಸುವುದು, ಅದಕ್ಕೆ ಬಣ್ಣಹಚ್ಚಿ ವಿನ್ಯಾಸಗೊಳಿಸುವುದರಲ್ಲಿ ಆಸಕ್ತಿ ಹೊಂದಿದ ಆಯೆನ್ನಾ ಕೊನೆಗೆ ಅದನ್ನೇ ವಿಶ್ವದಾಖಲೆಯ ಸಾಧನವನ್ನಾಗಿ ಬಳಸಿಕೊಂಡರು. ಫಲವಾಗಿ 2017 ರಲ್ಲಿ ಆಯೆನ್ನಾ, 19 ಅಡಿ 10.9 ಇಂಚಿನವರೆಗೆ ಉಗುರು ಬೆಳೆಸಿ ಚೆಂದನೆಯ ಬಣ್ಣ ಹಚ್ಚಿ ವಿಶ್ವದಾಖಲೆ ಬರೆದರು.

2021 ರಲ್ಲಿ ತಮ್ಮ ಉದ್ದನೆಯ ಉಗುರಿಗೆ ಮುಕ್ತಿಕೊಡಲು ನಿರ್ಧರಿಸಿದ ಆಯೆನ್ನಾ ತಮ್ಮದೇ ವಿಶ್ವದಾಖಲೆಯನ್ನು ಉಗುರಿನ ಉದ್ದನಿಂದ ಉತ್ತಮಗೊಳಿಸಿ ಹೊಸದಾಖಲೆ ಬರೆದು ಉಗುರಿಗೆ ಮುಕ್ತಿ ನೀಡಿದ್ದಾರೆ. 2021 ರಲ್ಲಿ ಕತ್ತರಿಸುವಾಗ ಆಯೆನ್ನಾ ಉಗುರಿನ ಉದ್ದ ಬರೋಬ್ಬರಿ 24 ಇಂಚು.

ಅಮೇರಿಕದ ವೈದ್ಯ ಡಾ.ಅಲಿಸನ್ ರೀಡಿಂಗರ್ ಆಯೆನ್ನಾ ಉದ್ದದ ಉಗುರಿಗೆ ಕತ್ತರಿ ಹಾಕಿದ್ದಾರೆ. 30 ವರ್ಷಗಳಿಂದ ಬೆಳೆಸಿದ್ದ ಉಗುರನ್ನು ಈಗ ಕತ್ತರಿಸಿದ್ದು ಅವುಗಳನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಆಯೆನ್ನಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.