ಭಾನುವಾರ, ಏಪ್ರಿಲ್ 27, 2025
HomeBreakingಟಾಲಿವುಡ್ ಸೀತೆಯ ಫರ್ಸ್ಟ್ ಲುಕ್ ರಿವೀಲ್….! ಆಲಿಯಾ ಭಟ್ ಹುಟ್ಟುಹಬ್ಬಕ್ಕೆ ರಾಜಮೌಳಿ ಕೊಟ್ರು ಸ್ಪೆಶಲ್...

ಟಾಲಿವುಡ್ ಸೀತೆಯ ಫರ್ಸ್ಟ್ ಲುಕ್ ರಿವೀಲ್….! ಆಲಿಯಾ ಭಟ್ ಹುಟ್ಟುಹಬ್ಬಕ್ಕೆ ರಾಜಮೌಳಿ ಕೊಟ್ರು ಸ್ಪೆಶಲ್ ಗಿಫ್ಟ್…!!

- Advertisement -

ಟಾಲಿವುಡ್ ಎಂಟ್ರಿ ಸಂಭ್ರಮದಲ್ಲಿರೋ ಬಾಲಿವುಡ್ ಸುಂದರಿ ಆಲಿಯಾ ಭಟ್ ಗೆ  ಹುಟ್ಟುಹಬ್ಬದ ಸಂಭ್ರಮ. 28 ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿರೋ ಆಲಿಯಾಗೆ ಆರ್.ಆರ್.ಆರ್ ಮೂವಿ ತಂಡ ಸಪ್ರೈಸ್ ಗಿಫ್ಟ್ ನೀಡಿದ್ದು, ಬಹುನೀರಿಕ್ಷಿತ ಆರ್.ಆರ್.ಆರ್ ಸಿನಿಮಾದ ಸೀತೆ ಲುಕ್ ರಿವೀಲ್ ಮಾಡಿದೆ.

ಟಾಲಿವುಡ್ ನಲ್ಲಿ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಮೂಲಕ ಆಲಿಯಾ ಭಟ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸಖತ್ ಕುತೂಹಲ ಮೂಡಿಸಿದ್ದ ಈ ಪಾತ್ರದ ಫರ್ಸ್ಟ್ ಲುಕ್ ರಿವೀಲ್ ಆಗಿದ್ದು, ಅಪ್ಪಟ ಪೌರಾಣಿಕ ಪಾತ್ರದಲ್ಲಿ ಆಲಿಯಾ ಮಿಂಚಿದ್ದಾರೆ.

ಆರ್.ಆರ್.ಆರ್. ಸಿನಿಮಾದಲ್ಲಿ ಆಲಿಯಾ ಭಟ್, ರಾಮಚರಣ ತೇಜಾಗೆ ಜೋಡಿಯಾಗಿದ್ದಾರೆ.

ಇದರೊಂದಿಗೆ  ಜ್ಯೂನಿಯರ್ ಎನ್ಟಿಆರ್, ಅಜಯ್ ದೇವಗನ್, ಓವಿಲಿಯಾ ಮೋರಿಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

RELATED ARTICLES

Most Popular