ಕೈಪಾಳಯ ಸೇರ್ತಾರಾ ಹ್ಯಾಟ್ರಿಕ್ ಹೀರೋ ಶಿವಣ್ಣ…! ಕುತೂಹಲ ಮೂಡಿಸಿದೆ ಡಿಕೆಶಿ-ಶಿವರಾಜ್ ಕುಮಾರ್ ಭೇಟಿ….!!

ರಾಜಕೀಯ ಅನ್ನೋದು ಸಿನಿಮಾ ನಟ-ನಟಿಯರ ಎರಡನೇ ಆಯ್ಕೆ ಮತ್ತು ಎರಡನೇ ತವರು ಇದ್ದಂತೆ. ಬಣ್ಣದ ಜೊತೆಗೆ ಖಾದಿಯ ನಂಟು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಇದೀಗ ದೊಡ್ಮನೆ ಹುಡುಗ, ಹ್ಯಾಟ್ರಿಕ್ ಹೀರೋ ಶಿವಣ್ಣನೂ ನಟನೆಯ ಬಳಿಕ ರಾಜಕೀಯಕಕ್ಕೆ ಇಳಿತಾರಾ ಅನ್ನೋ ಪ್ರಶ್ನೆ ಮೂಡಿದ್ದು, ಶಿವರಾಜ್ ಕುಮಾರ್ ಹಾಗೂ ಡಿಕೆಶಿ ಭೇಟಿ ಚರ್ಚೆಗೆ ಗ್ರಾಸವಾಗಿದೆ.

ಕಳೆದೆರಡು ದಿನಗಳ ಹಿಂದೆ ಮಾಜಿಸಿಎಂ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ತಾವು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ತಮ್ಮೊಂದಿಗೆ ಸಹೋದರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಬರ್ತಾರೆ ಎಂದಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಡಾ.ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವರ ಸದಾಶಿವ ನಗರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಮತ್ತು ಮಾತುಕತೆ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿವಣ್ಣ ಕೂಡ  ಪತ್ನಿ ಜೊತೆ ಕಾಂಗ್ರೆಸ್ ಸೇರ್ತಾರಾ ಅನ್ನೋ ಅನುಮಾನ ಮೂಡಿಸಿದೆ.

ಶಿವರಾಜ್ ಕುಮಾರ್ ಹಾಗೂ ಡಾ.ರಾಜಕುಮಾರ್ ಕುಟುಂಬ ಮೊದಲಿನಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದೆ. ಡಾ.ರಾಜಕುಮಾರ್ ಗೆ ತಮ್ಮ ಕುಟುಂಬದ ಯಾವುದೇ ಸದಸ್ಯರು ರಾಜಕೀಯ ಸೇರೋದು ಇಷ್ಟವಿರಲಿಲ್ಲ ಎನ್ನಲಾಗಿತ್ತು. ಆದರೆ ಈಗ ಪತ್ನಿ ಹಾಗೂ ಭಾವ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಹೊತ್ತಿನಲ್ಲಿ ಶಿವಣ್ಣ ಡಿಕೆಶಿ ಭೇಟಿ  ಶಿವರಾಜ್ ಕುಮಾರ್ ರಾಜಕೀಯದಲ್ಲಿ ತಮ್ಮ ಇನ್ನಿಂಗ್ಸ್ ಆರಂಭಿಸುತ್ತಾರಾ ಎನ್ನುವ ಪ್ರಶ್ನೆ ಮೂಡಿಸಿದೆ.

ಆದರೆ ಈ ಭೇಟಿಯನ್ನು ರಾಜಕೀಯದ ಹೊರತಾದ ಭೇಟಿ ಎಂದಿರುವ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್ ತಮ್ಮ ವೈಯಕ್ತಿಕ ವಿಚಾರದ ಕುರಿತು ಮಾತನಾಡಲು ಬಂದಿದ್ದರು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಎಲ್ಲೋ ಒಂದು ಕಡೆ ರಾಜಕುಮಾರ್ ಕುಟುಂಬದ ರಾಜಕೀಯ ಪ್ರವೇಶ ಖಚಿತ ಎನ್ನಲಾಗ್ತಿದೆ.

Comments are closed.