ಬೆಂಗಳೂರು : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಪ್ರವಾಸಿ ತಾಣಗಳಿಂದಲೇ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿತ್ತು. ಈ ಕುರಿತು ಕಳೆದೆರಡು ದಿನಗಳ ಹಿಂದೆಯೇ News next ಈ ಕುರಿತು ವಿಸ್ತ್ರತ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ರಾಜ್ಯದಾದ್ಯಂತ ರಜೆ ಘೋಷಣೆಯನ್ನು ಮಾಡಿತ್ತು.

ಆದರೆ ಪ್ರವಾಸಿ ತಾಣಗಳಿಗೆ ಮಾತ್ರ ಯಾವುದೇ ನಿರ್ಬಂಧ ಹೇರಿರಲಿಲ್ಲ. ಈ ಕುರಿತು ನ್ಯೂಸ್ ನೆಕ್ಸ್ಟ್ ನಿನ್ನೆಯೂ ಕೂಡ ಪ್ರವಾಸಿ ತಾಣಗಳಿಗಿಲ್ಲವೇ ಸರಕಾರ ನಿರ್ಬಂಧ ಹೆಸರಿನಲ್ಲಿ ವರದಿ ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ರಾಜ್ಯ ಸರಕಾರ ಎಲ್ಲಾ ಬೀಚ್, ಮೈಸೂರು ಅರಮನೆ, ಅಭಯಾರಣ್ಯ ಸೇರಿದಂತೆ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿದೆ.