ಉಡುಪಿ : ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿ ಮೀನುಗಾರನೋರ್ವ ಸಾವನ್ನಪ್ಪಿರುವ ಘಟನೆ ಮಲ್ಪೆ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಲ್ಯಾಣಪುರದ ನಿವಾಸಿಯಾಗಿರುವ ವಿಶ್ವನಾಥ್ ( 48 ವರ್ಷ) ಎಂಬವರೇ ಮೃತ ದುರ್ದೈವಿ. ಮಹಾಬಲೇಶ್ವರ ಬೋಟ್ ನಲ್ಲಿ ಮಲ್ಪೆ ಬಂದರಿನಿಂದ ಫೆಬ್ರವರಿ 16 ರಂದು ಮೀನುಗಾರಿಕೆಗೆ ತೆರಳಿದ್ದರು.
ಆದರೆ ಫೆಬ್ರವರಿ 17ರಂದು ಮುಂಜಾನೆಯ ವೇಳೆಯಲ್ಲಿ ದೈತ್ಯಾಕಾರದ ಅಲೆಯು ಬೋಟ್ ಗೆ ಅಪ್ಪಳಿಸಿದ್ದು, ಬೋಟ್ ಮುಗುಚಿ ಬಿದ್ದಿದೆ. ಈ ವೇಳೆಯಲ್ಲಿ ವಿಶ್ವನಾಥ್ ಸಮುದ್ರಕ್ಕೆ ಮಗುಚಿ ಬಿದ್ದಿದ್ದು, ಈ ವೇಳೆಯಲ್ಲಿ ಹುಡುಕಾಟ ನಡೆಸಿದ್ದರೂ ಕೂಡ ಪತ್ತೆಯಾಗಿರಲಿಲ್ಲ. ಇದೀಗ ಮೀನುಗಾರ ವಿಶ್ವನಾಥ್ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.