ರಾಜಾಮಾರ್ತಾಂಡ್ ಸಿನಿಮಾ ಚಿರುವಿನ ಕನಸಾಗಿತ್ತು…! ಸಿನಿಮಾದ ಬಗ್ಗೆ ಮೇಘನಾ ರಾಜ್ ಮನದಾಳದ ಮಾತು…!!

ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ಯುವ ಸಾಮ್ರಾಟ್ ಚಿರು ನಿಧನರಾಗಿ ವರ್ಷವಾಗುತ್ತ ಬಂದರೂ ಸ್ಯಾಂಡಲ್ ವುಡ್ ಅಂಗಳದಲ್ಲಿ ಅವರ ಚಿತ್ರಗಳ ಭರಾಟೆ ಕಡಿಮೆಯಾಗಿಲ್ಲ. ಶಿವಾರ್ಜುನ್ ರೀ ರಿಲೀಸ್ ಬಳಿಕ ಈಗ ರಾಜಾಮಾರ್ತಾಂಡ್ ಟ್ರೇಲರ್ ಸದ್ದು ಮಾಡಿದ್ದು, ರಾಜಾಮಾರ್ತಾಂಡ್ ಸಿನಿಮಾ ಹಾಗೂ ಅದರಲ್ಲಿ ಚಿರು ತೊಡಗಿಸಿಕೊಂಡ ಬಗ್ಗೆ ಮೇಘನಾ ರಾಜ್ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಚಿರುಗೆ ರಾಜಾಮಾರ್ತಾಂಡ್ ಸಿನಿಮಾ ತುಂಬ ಸ್ಪೆಶಲ್ ಆಗಿತ್ತು. ಆ ಚಿತ್ರ ಎಷ್ಟು ಸ್ಪೆಶಲ್ ಆಗಿತ್ತು ಅನ್ನೋದನ್ನು ಚಿರುವಿನ ಆಪ್ತ ವಲಯಕ್ಕೆ  ಕೇಳಿದ್ರೆ ಗೊತ್ತಾಗುತ್ತೆ. ಎಷ್ಟಂದರೇ ಆ ಸಿನಿಮಾದ ಡೈಲಾಗ್ ಗಳು ನಮಗೆಲ್ಲ ಪ್ರತಿಕ್ಷಣ ನೆನಪಾಗುತ್ತಿದೆ. ಅಷ್ಟು ಸಲ ಚಿರು ಆ ಡೈಲಾಗ್ ಗಳನ್ನು ಗುಣುಗುತ್ತಿದ್ದರು. ಪ್ರತಿಕ್ಷಣ ಸಿನಿಮಾದ ಬಗ್ಗೆ ಚರ್ಚೆ ಹಾಗೂ ತಯಾರಿಯಲ್ಲೇ ಇರುತ್ತಿದ್ದರೂ ಅಂತ ಮೇಘನಾ ರಾಜ್ ಹೇಳಿದ್ದಾರೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಬಗ್ಗೆ ಚಿರು ಮಾತನಾಡಿರುವ ಮೇಘನಾ ರಾಜ್, ಚಿರು ಕೆರಿಯರ್ ನಲ್ಲೇ ರಾಜಾ ಮಾರ್ತಾಂಡ್ ಒಂದು ವಿಭಿನ್ನ ಹಾಗೂ ವಿಶೇಷ ಚಿತ್ರ. ಈ ಚಿತ್ರಕ್ಕಾಗಿ ಚಿರು ಸಾಕಷ್ಟು ಸಿದ್ಧತೆ ಮಾಡಿದ್ದರು. ನಟನೆಯಲ್ಲೂ ತಮ್ಮನ್ನು ತಾವು ಪೂರ್ತಿಯಾಗಿ ತೊಡಗಿಸಿಕೊಂಡಿದ್ದರು ಎಂದಿದ್ದಾರೆ.

ಫೆ.19 ರಂದು ತಮ್ಮ ಪುತ್ರ  ಈ ಚಿತ್ರದ ಟ್ರೇಲರ್ ಲಾಂಚ್ ಮಾಡೋದಾಗಿ ಹೇಳಿಕೊಂಡಿರೋ ಮೇಘನಾ ರಾಜ್, ಈ ಚಿತ್ರಕ್ಕೆ ಧ್ರುವ್ ಸರ್ಜಾ ಧ್ವನಿ ನೀಡಿದ್ದು, ಜ್ಯೂನಿಯರ್ ಚಿರು ಟ್ರೇಲರ್ ಲಾಂಚ್ ಮಾಡಿರೋದರಿಂದ ಇದೊಂತರ ನಮ್ಮ ಫ್ಯಾಮಿಲಿ ಸಿನಿಮಾದಂತಿದೆ. ಟ್ರೇಲರ್ ನೋಡಿ ಆನಂದಿಸಿ ಅಂತ ಮನವಿ ಮಾಡಿದ್ದಾರೆ.

ಧ್ರುವ್ ಸರ್ಜಾ ಪೊಗರು ಸಿನಿಮಾದ ಇಂಟರವೆಲ್ ನಲ್ಲಿ  ರಾಜಾಮಾರ್ತಾಂಡ್ ಟ್ರೇಲರ್ ಪ್ರದರ್ಶನವಾಗುತ್ತಿದ್ದು, ಸಧ್ಯದಲ್ಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ. ಇನ್ನು ಚಿರು ಸಿನಿಮಾಗೆ ಸಂಪೂರ್ಣ ಸಹಕಾರ ನೀಡಿರೋ ಧ್ರುವ್ ಸರ್ಜಾ ಅಣ್ಣನ ಸಿನಿಮಾ ನೋಡಿ ಆಶೀರ್ವದಿಸಿ ಅಂತ ಮನವಿ ಮಾಡಿದ್ದಾರೆ.

ರಾಜಾಮಾರ್ತಾಂಡ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾಗ ಜೂನ್ 7 ರಂದು ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಬಳಿಕ ಚಿತ್ರವನ್ನು ಧ್ರುವ್ ಸರ್ಜಾ ಡಬ್ಬಿಂಗ್ ಮಾಡಿ ಬಿಡುಗಡೆಗೆ ಸಹಕರಿಸಿದ್ದರು.

Comments are closed.