ಉಡುಪಿ : ಕಳೆದ ಮೂರು ದಿನಗಳಿಂದಲೂ ಅನಾರೋಗ್ಯ ಪೀಡಿತವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಡುಪಿಯ ಬನ್ನಂಜೆಯಲ್ಲಿ ನಡೆದಿದ್ದು, ಕೊರೊನಾ ಆತಂಕ ಎದುರಾಗಿದೆ. ಉಡುಪಿ ನಗರದ ಬನ್ನಂಜೆಯ ನಿವಾಸಿಯಾಗಿರುವ ವ್ಯಕ್ತಿ ಕಳೆದ ಮೂರು ದಿನಗಳಿಂದಲೂ ಜ್ವರ, ಶೀತ ಹಾಗೂ ಕೆಮ್ಮದಿಂದ ಬಳಲುತ್ತಿದ್ದ. ವ್ಯಕ್ತಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಇದೀಗ ವ್ಯಕ್ತಿಯ ಗಂಟಲಿನ ದ್ರವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.