ಕರ್ನಾಟಕಕ್ಕೆ ಬಿಗ್ ಶಾಕ್ ಕೊಟ್ಟ ಮುಂಬೈ ಸೋಂಕು : ರಾಜ್ಯದಲ್ಲಿಂದು ಒಂದೇ ದಿನ 54 ಮಂದಿಗೆ ಕೊರೊನಾ

0

ಬೆಂಗಳೂರು : ಕರ್ನಾಟಕಕ್ಕೆ ಭಾನುವಾರ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 54 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ ಮುಂಬೈನಿಂದ ವಾಪಾಸಾಗಿದ್ದ 40 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

ಮಂಡ್ಯದಲ್ಲಿ ಒಂದೇ ದಿನ 22 ಮಂದಿಗೆ ಡೆಡ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೊದಲ ಬಲಿ ಪಡೆದ ಕಲಬುರಗಿಯಲ್ಲಿಯೂ ಕೊರೊನಾ ಸೋಂಕು ಹೆಚ್ಚುತ್ತಿದ್ದ ಇಂದು 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಮುಂಬೈನಿಂದ ಸೋಂಕು ವ್ಯಾಪಿಸಿರುವ ಹಾಸನ ಜಿಲ್ಲೆಯಲ್ಲಿಯೂ ಇಂದು 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಕೋಲಾರದಲ್ಲಿ 3 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 2 ಮಂದಿಗೆ ಕೊರೊನಾ ವ್ಯಾಪಿಸಿದ್ರೆ, ಉಡುಪಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊರೊನಾ ಸೊಂಕಿಗೆ ಬಲಿಯಾಗಿದ್ದಾನೆ.

ಕೊರೊನಾ ಸೋಂಕಿಗೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 18 ಮಂದಿ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ 7 ಮಂದಿ ಮಕ್ಕಳಿಗೂ ಕೂಡ ಮಹಾಮಾರಿ ಒಕ್ಕರಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Leave A Reply

Your email address will not be published.