ಬೆಂಗಳೂರು : ವಿದ್ಯಾಗಮ ಯೋಜನೆಯಿಂದಾಗಿ ರಾಜ್ಯದಲ್ಲಿ ಶಿಕ್ಷಕರ ಸಾವಿನ ಸರಣಿ ಮುಂದುವರಿಯುತ್ತಿದ್ದಂತೆಯೇ ಸರಕಾರದ ಯೋಜನೆಯ ವಿರುದ್ದ ಅಪಸ್ವರ ಕೇಳಿಬಂದಿದೆ. ಅದ್ರಲ್ಲೂ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ.

ವಿದ್ಯಾಗಮ ಯೋಜನೆಯಿಂದಾಗಿ ಎದುರಾದ ಕೊರೊನಾ ವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಹಲವು ಶಿಕ್ಷಕರು ಸಾವನ್ನಪ್ಪಿದ್ದಾರೆ. ಹೀಗಾಗಿ ಮೃತ ಶಿಕ್ಷಕರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು. ಸೋಮವಾರದೊಳಗೆ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿ ಸದೇ ಇದ್ದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ ಡಿಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಚುನಾವಣೆಗಿಂತ ಜೀವವೇ ಮುಖ್ಯ. ಹೀಗಾಗಿ ಶಿಕ್ಷಕರ ಪರವಾಗಿ ಅಹೋರಾತ್ರಿ ಧರಣೆ ನಡೆಸುತ್ತೇನೆ. ವಿದ್ಯಾಗಮ ತರಗತಿಗಳಿಗೆ ಯಾರೂ ಕೂಡ ಹೋಗಬೇಡಿ. ಮಾತ್ರವಲ್ಲ ಪೋಷಕರು ಕೂಡ ಮಕ್ಕಳನ್ನು ಕಳುಹಿಸಬೇಡಿ ಎಂದು ಅವರು ಪೋಷಕರಲ್ಲಿ ಮನವಿ ಮಾಡಿದ್ದಾರೆ.