ಕಾರು ಢಿಕ್ಕಿ ಅಪಘಾತಕ್ಕೀಡಾಗಿದ್ದ ಬಾಲಕನನ್ನು ನೈರ್ಮಲ್ಯ ಕಾರ್ಮಿಕನೊಬ್ಬ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಅಪಾರ ಪ್ರಶಂಸೆಗೂ ಪಾತ್ರವಾಗಿದೆ.
ಈ ಸಿಸಿ ಟಿವಿ ದೃಶ್ಯಾವಳಿಯನ್ನು ವೃತ್ತಿಪರ ಬಾಸ್ಕೆಟ್ ಬಾಲ್ ನ ಮಾಜಿ ಆಟಗಾರ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ರೆಕ್ಸ್ ಚಾಪ್ ಮ್ಯಾನ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video : 2 ಸುರಂಗದೊಳಗೆ ಚಲಿಸಿತು ವಿಮಾನ : ವೈರಲ್ ಆಯ್ತು ಗಿನ್ನಿಸ್ ದಾಖಲೆಯ ವೀಡಿಯೋ
ಈ ದೃಶ್ಯದಲ್ಲಿ ಚಿಕ್ಕ ಬಾಲಕನೊಬ್ಬ ಕಸದ ಲಾರಿ ಹೋಗುವುವುಕ್ಕಾಗಿ ಮನೆ ಗೇಟ್ ಬಳಿ ಕಾಯುತ್ತಿದ್ದ. ಅದು ಮುಂದಕ್ಕೆ ಚಲಿಸುತ್ತಿದ್ದಂತೆ ಹಿಂದಿನಿಂದ ಬಾಲಕ ಓಡಿದ್ದಾನೆ. ಈ ವೇಳೆ ಎದುರಿನಿಂದ ವೇಗವಾಗಿ ಕಾರು ಬಂದಿದೆ. ಕೂಡಲೇ ಅಲ್ಲಿದ್ದ ನೈರ್ಮಲ್ಯ ಕಾರ್ಮಿಕ ಬಾಲಕನನ್ನು ಕೂದಲೆಳೆ ಅಂತರದಲ್ಲಿ ಕಾಪಾಡಿದ್ದಾನೆ.
ಇದನ್ನೂ ಓದಿ: Viral Video : ಮಾಸ್ಕ್ ಧರಿಸದೇ ಇರುವವರು ಈ ಕೋತಿಯನ್ನು ನೋಡಿ ಕಲಿಯಬೇಕು !
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ವಿಡಿಯೋವನ್ನು 1.3 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ ನೈರ್ಮಲ್ಯ ಕಾರ್ಮಿಕನಿಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
(A lot of praise for the sanitation worker’s punctuality! Video goes viral)