ಹಿರಿಯ ನಟಿ ಲೀಲಾವತಿಯವರನ್ನು ಭೇಟಿ ಮಾಡಿ, ಬಿರಿಯಾನಿ ಭೋಜನ ಮಾಡಿಸಿ ಸಂಭ್ರಮಿಸಿದ ನಟಿಮಣಿಯರು

ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಎಂದ್ರೇ ಎಲ್ಲರಿಗೂ ಅಚ್ಚುಮೆಚ್ಚು. ನಟಿ ಲೀಲಾವತಿಯವರು ಅಷ್ಟೇ ಯಾರಿಗೆ ಕಷ್ಟ ಬಂದರೂ ಓಡೋಡಿ ಬಂದು ಸಮಾಧಾನಿಸುತ್ತಾರೆ. ಅಂಥ ಮಾತೃಸ್ವರೂಪಿಯನ್ನು ನಿನ್ನೆ ಸ್ಯಾಂಡಲ್ ವುಡ್ ಹಿರಿಯ ನಟಿಯರು ಭೇಟಿ ಮಾಡಿದ್ದು, ಅವರೊಂದಿಗೆ ದಿನಕಳೆದು ಬಿರಿಯಾನಿ ಸವಿದು ಸಂಭ್ರಮಿಸಿದ್ದಾರೆ.

ಕೆಲಕಾಲದಿಂದ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ನೆಲಮಂಗಲದ ಬಳಿ ವಾಸವಾಗಿದ್ದಾರೆ. ತಮ್ಮದೇ ತೋಟ,ಮನೆಯೊಂದಿಗೆ ಕಾಲಕಳೆಯುತ್ತಿರುವ ಈ ತಾಯಿ ಮಗನಿಗೆ ಸಾಕಷ್ಟು ಭಾರಿ ಕಿರುಕುಳ ಎದುರಾಗಿದೆ. ಆದರೂ ಎಲ್ಲವನ್ನು ಸಹಿಸಿಕೊಂಡು ಬದುಕುತ್ತ ಬಂದಿದ್ದಾರೆ.

ಇತ್ತೀಚಿಗೆ ನಟಿ ಲೀಲಾವತಿಯವರು ಬಾತ್ ರೂಂನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಚಿಕಿತ್ಸೆ ಪಡೆದು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಹಿರಿಯ ನಟಿಯರಾದ ಹೇಮಾ ಚೌಧರಿ, ಶ್ರುತಿ,ಭಾರತಿ ವಿಷ್ಣುವರ್ಧನ್ ಭೇಟಿ ನೀಡಿದ್ದು, ಲೀಲಾವತಿಯವರ ಆರೋಗ್ಯ ವಿಚಾರಿಸಿ ಅವರೊಂದಿಗೆ ದಿನಕಳೆದು ಸೇವೆ ಮಾಡಿ ಬಂದಿದ್ದಾರೆ. ಪೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೇಮಾ ಚೌಧರಿಯವರು ಲೀಲಾವತಿಯರಿಗೆ ಶಾಲು ಹೊದೆಸಿ ಸನ್ಮಾನ ಮಾಡಿದ್ದರೇ, ಶ್ರುತಿಯವರು ತಮ್ಮ ಕೈಯಾರೆ ಬಿರಿಯಾನಿ ಮಾಡಿ ಲೀಲಾವತಿಯವರಿಗೆ ಊಟ ಬಡಿಸಿದ್ದಾರೆ. ಬಳಿಕ ಲೀಲಾವತಿಯವರು ನಟಿಯರೊಂದಿಗೆ ಊಟ ಸವಿದು ಹಾಡು ಹಾಡಿ ತಮ್ಮ ನೋವು,ಅನಾರೋಗ್ಯ ಮರೆತು ಕಾಲ ಕಳೆದಿದ್ದಾರಂತೆ.

ಕೆಲದಿನಗಳ ಹಿಂದೆಯಷ್ಟೇ ನಟಿ ಸುಧಾರಾಣಿ, ಶ್ರುತಿ,ಮಾಳವಿಕಾ ಕೂಡ ಲೀಲಾವತಿಯವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಬದುಕಿನ ಸಂಧ್ಯಾಕಾಲದಲ್ಲಿರುವ ಲೀಲಾವತಿಯವರಿಗೆ ತಾವು ಒಂಟಿ ಎಂಬ ಭಾವನೆ ಬರಬಾರದು ಎಂಬುದು ಈ ನಟಿಯರ ಆಶಯ. ಹೀಗಾಗಿ ಆಗಾಗ ಅವರನ್ನು ಭೇಟಿ ಮಾಡಿ ಉತ್ಸಾಹ ತುಂಬುತ್ತಿದ್ದಾರೆ.  

Actress shruti,hema and bharathivishnuvardhan visited senior actress lilavathi house

Comments are closed.