ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶವನ್ನು ತಲ್ಲಣಗೊಳಿಸಿದೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಎರಡೂವರೆ ಲಕ್ಷದ ಸನಿಹದಲ್ಲಿದೆ. ಈ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದು, ಮುಂದಿನ ಮೂರು ವಾರಗಳಲ್ಲಿ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದ್ವಿಗುಣವಾಗಲಿದೆಯಂತೆ.

ಹೌದು, ಕೋವಿಡ್ -19 (ಕೊರೊನಾ) ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಭಾರತ ಸರಕಾರ ಅಗತ್ಯಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರಕಾರದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಆದ್ರೀಗ ದೇಶದಲ್ಲಿ ಗುಣಾತ್ಮಕವಾಗಿ ಕೊರೊನಾ ಸೋಂಕು ಹೆಚ್ಚುತ್ತಿಲ್ಲ, ಆದ್ರೆ ದೇಶದ ಮಟ್ಟಿಗೆ ಕೊರೊನಾ ಸೋಂಕಿನಿಂದ ಅಪಾಯ ಸಂಭವಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ವಿಪತ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕಲ್ ಜೆ. ತಿಳಿಸಿದ್ದಾರೆ.

ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದ್ದು, 19.6 ಲಕ್ಷ ಮಂದಿ ಸೋಂಕಿತರಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್ 6.76 ಲಕ್ಷ ಮಂದಿ ಕೊರೊನಾ ಪೀಡಿತರಿದ್ದು 36,044 ಮಂದಿ ಸಾವನ್ನಪ್ಪಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 4.59ಲಕ್ಷ ಮಂದಿ ಕೊರೊನಾ ಪೀಡಿತರಿದ್ದು, 5,725 ಮಂದಿ ಸಾವನ್ನಪ್ಪಿದ್ದಾರೆ. ಇಂಗ್ಲೇಂಡ್ ನಾಲ್ಕನೇ ಸ್ಥಾನದಲ್ಲಿದ್ದು 2.85 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಈಗಾಗಲೇ ಬರೋಬ್ಬರಿ 40,465 ಮಂದಿ ಸಾವನ್ನಪ್ಪಿದ್ರೆ, ಭಾರತ ಐದನೇ ಸ್ಥಾನದಲ್ಲಿದ್ದು 2.47 ಲಕ್ಷ ಮಂದಿ ಸೋಂಕಿತರಿದ್ದು, 6.929 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ. 5ನೇ ಸ್ಥಾನದಲ್ಲಿರುವ ಭಾರತ ಕೊರೊನಾ ಹರಡುವಿಕೆಯ ಅಂಕಿಅಂಶಗಳನ್ನು ನೋಡಿದ್ರೆ ಒಂದು ವಾರದಲ್ಲಿ ನಾಲ್ಕನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಈಗಾಗಲೇ ಕೊರೊನಾದಿಂದ ತತ್ತರಿಸಿದ್ದ ಚೀನಾ, ಇಟಲಿಯನ್ನು ಭಾರತ ಹಿಂದಿಕ್ಕಿದೆ. ಆದರೆ ಸಮಾಧಾನದ ಸಂಗತಿಯೆಂದ್ರೆ ಭಾರತ ಕೊರೊನಾ ಚೇತರಿಕೆ ಕಾಣುತ್ತಿರುವವರ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಇದುವರೆಗೆ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಏಪ್ಯಾ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸ್ಪೋಟಗೊಂಡಿಲ್ಲ. ಆದರೆ ಅದರಿಂದ ಸಂಭವಿಸುವ ಅಪಾಯ ಯಾವಾಗ್ಲೂ ಇದೆ. ಲೌಕ್ ಡೌನ್ ಜಾರಿಯಿಂದಾಗಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣದಲ್ಲಿತ್ತು. ಆದ್ರೀಗ ಲಾಕ್ ಡೌನ್ ಸಡಿಲಗೊಂಡಿರುವುದರಿಂದ ಸೋಂಕು ಹರಡುವ ಪರಿಣಾಮ ಗಂಭೀರ ಸ್ಥಿತಿಗೆ ತಲುಪುವ ಆತಂಕ ಎದುರಾಗಿದೆ. ಲಾಕ್ ಡೌನ್ ಸಡಿಲಿಕೆಯಿಂದ ದೇಶದಲ್ಲಿ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕಾರ್ಮಿಕರಿಗೆ ವಲಸೆ ಹೋಗುವುದು ಕೂಡ ಅನಿವಾರ್ಯ.

ದೇಶದಲ್ಲಿರುವ 130 ಕೋಟಿ ಜನಸಂಖ್ಯೆಗೆ ಹೋಲಿಸಿದ್ರೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯೆನಿಸುತ್ತಿದೆ. ಆದರೆ ಕೊರೊನಾ ಸ್ಪೋಟಗೊಂಡ್ರೆ ಆತಂಕ ತಪ್ಪಿದ್ದಲ್ಲ. ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 10,000ಕ್ಕೂ ಮಿಕ್ಕಿದಂತೆ ಕೊರೊನಾ ಸೋಂಕಿತರ ಪತ್ತೆಯಾಗುತ್ತಿರುವುದನ್ನು ಗಮಿಸಿದ್ರೆ ಅಪಾಯ ತಪ್ಪಿದ್ದಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.