ಜೆನೆವಾ : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ. ಈ ನಡುವಲ್ಲೇ ವಿಶ್ವಸಂಸ್ಥೆ ಆಘಾತಕಾರಿ ಮಾಹಿತಿಯೊಂದನ್ನು ಬಾಯ್ಬಿಟ್ಟಿದೆ. ಕೊರೊನಾ ವೈರಸ್ ಸೋಂಕು ಭೂಮಿಯ ಮೇಲೆ ಧೀರ್ಘಕಾಲದ ವರೆಗೆ ಇರುತ್ತದೆ. ಎಲ್ಲಾ ರಾಷ್ಟ್ರಗಳು ಎಚ್ಚರದಿಂದ ಇರಬೇಕು ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜೆನೆವಾದಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದ್ಹನೊಮ್ ಗೆಬ್ರೆಯೆಸಸ್, ಕೆಲವು ರಾಷ್ಟ್ರಗಳು ಕೊರೊನಾ ವೈರಸ್ ಸೋಂಕು ನಿಯಂತ್ರಣದಲ್ಲಿವೆ ಎಂದು ಭಾವಿಸುತ್ತಿವೆ.

ಆದ್ರೆ ಕೊರೊನಾ ನಿಯಂತ್ರಣಕ್ಕೆ ಬಂದ ರಾಷ್ಟ್ರಗಳಲ್ಲಿಯೇ ಇದೀಗ ಕೊರೊನಾ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೊರೊನಾ ಸೋಂಕು ಭೂಮಿಯ ಮೇಲೆ ಧೀರ್ಘ ಸಮಯದವರೆಗೆ ಇರಲಿದೆ. ಪ್ರತಿಯೊಂದು ರಾಷ್ಟ್ರಗಳು ಕೂಡ ಕೊರೊನಾ ವೈರಸ್ ನ ಬಗ್ಗೆ ಜಾಗೃತವಾಗಿರಬೇಕು ಎಂದಿದ್ದಾರೆ.

ಆಫ್ರಿಕಾ, ಅಮೇರಿಕಾ ದೇಶಗಳಲ್ಲಿ ಕೊರೊನಾ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದರೆ ಪಶ್ಚಿಮ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಸ್ಥಿರವಾಗಿದ್ದು, ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಇನ್ನು ಕೊರೊನಾ ಸೋಂಕಿನಿಂದ ಜಾಗೃತವಾಗುವ ನಿಟ್ಟಿನಲ್ಲಿ ಜನವರಿ 30 ರಂದು ಜಾಗತಿಕ ತುರ್ತು ಆರೋಗ್ಯ ಸಮಸ್ಯೆಯೆಂದು ಘೋಷಿಸಲಾಗಿದೆ ಎಂದಿದ್ದಾರೆ.