‘1921’ ಸಂಖ್ಯೆಯಿಂದ ಕರೆ ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ ! ಅಷ್ಟಕ್ಕೂ ನಿಮಗೆ ಕರೆ ಮಾಡುವವರು ಯಾರು ಗೊತ್ತಾ ?

0

ನವದೆಹಲಿ : ಕೊರೊನಾ ಮಹಾಮಾರಿಯ ವಿರುದ್ದ ಸಮರ ಸಾರಿರೋ ಭಾರತ ಸರಕಾರ ಹಲವು ಆಯಾಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಇದೀಗ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಸರಕಾರ ಆ್ಯಪ್, ವೆಬ್ ಸೈಟ್ ಗಳ ಮೂಲಕ ಮಾಹಿತಿಗಳನ್ನು ತಲುಪಿಸುತ್ತಿದ್ದು, ಇದೀಗ ‘1921’ ಸಂಖ್ಯೆಯಿಂದ ಕರೆ ಮಾಡೋ ಮೂಲಕ ಜನರ ಬಳಿಗೆ ತಲುಪಲು ಮುಂದಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಕುರಿತು ದೇಶದಾದ್ಯಂತ ಸಮೀಕ್ಷೆಯೊಂದನ್ನು ನಡೆಸಲು ಮುಂದಾಗಿದೆ. ಅದಕ್ಕಾಗಿ ‘1921’ ಸಂಖ್ಯೆಯಿಂದ ದೇಶದ ಜನರಿಗೆ ಕರೆ ಮಾಡಿ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದೆ. ಈ ಕುರಿತು ಈಗಾಗಲೇ ಇಲಾಖೆ ಅಧಿಕೃತ ಅಧಿಸೂಚನೆಯೊಂದನ್ನು ಹೊರಡಿಸಿದೆ.

ಡಿಜಿಟಲ್ ಮಾಧ್ಯಮಗಳ ಮೂಲಕ ಸರಕಾರ ಜನರ ಬಳಿಗೆ ತಲುಪೋ ಕಾರ್ಯವನ್ನು ಮಾಡುತ್ತಿದ್ದು, NIC ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ.

ವಾಸ್ತವಿಕವಾಗಿ ಇದೊಂದು ಸಮೀಕ್ಷೆಯಾಗಿದ್ದು, 1921 ಈ ಸಂಖ್ಯೆಯಿಂದ ಕರೆ ಮಾಡಿ ನೀವು ಮನೆಯಲ್ಲಿದ್ದೀರಾ ? ನೀವು ಕೊರೊನಾ ಬಗ್ಗೆ ಕೇಳಿದ್ದೀರಾ ? ಕೊರೊನಾದ ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿದೆಯಾ ? ನಿಮಗೆ ಏನಾದ್ರೂ ಸಮಸ್ಯೆಯಿದೆಯಾ ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಸರಕಾರ ಕೇಳಲಿದ್ದು, ಜನರಿಂದ ಉತ್ತರವನ್ನು ನಿರೀಕ್ಷಿಸುತ್ತಿದೆ.

ನಿಮಗೆನಾದ್ರೂ ‘1921’ ಸಂಖ್ಯೆಯಿಂದ ಕರೆ ಬಂದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಸರಕಾರ ಕೈಗೊಂಡಿರುವ ಪ್ರಯತ್ನಕ್ಕೆ ಜನರು ಕೂಡ ಕೈ ಜೋಡಿಸಬೇಕಿದೆ. ಕೊರೊನಾ ಲಕ್ಷಣಗಳ ಬಗ್ಗೆ ಅರಿತುಕೊಂಡು ಸರಕಾರಕ್ಕೆ ಸಮಪರ್ಕ ಮಾಹಿತಿಯನ್ನು ನೀಡಬೇಕು. ಕೇವಲ ‘1921’ ಸಂಖ್ಯೆಯಿಂದ ಕರೆ ಬಂದ್ರೆ ಮಾತ್ರವೇ ಮಾಹಿತಿಯನ್ನು ನೀಡಿ.

ಆದರೆ ಆರೋಗ್ಯ ಇಲಾಖೆಯ ಹೆಸರಿನಲ್ಲಿ ಬರುವ ಇತರ ಕರೆಗಳು ಬಂದ್ರ ಎಚ್ಚರಿಕೆವಹಿಸಲೇ ಬೇಕು. ಇತರರು ಕರೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಿದ್ರೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಕೊವಿಡ್ -19 ವಿರುದ್ದ ಸಮರ ಸಾರಿರೋ ಕೇಂದ್ರ ಸರಕಾರದ ಕಾರ್ಯಕ್ಕೆ ಪ್ರತಿಯೊಬ್ಬ ನಾಗರೀಕರು ಕೈಜೋಡಿಸಬೇಕಿದೆ.

Leave A Reply

Your email address will not be published.