ನಿಮ್ಮ ಹೆಸರು ಕಮಲಾನಾ ಅಥವಾ ಕಮಲಂ,ಕಮಲ್?. ಹಾಗಿದ್ದರೇ ನೀವು ನಿಮ್ಮ ವಿಕೆಂಡ್ ನ್ನು ವಂಡರಲಾದಲ್ಲಿ ಫ್ರೀಯಾಗಿ ಕಳೆಯಬಹುದು. ಇಂತಹದೊಂದು ಆಫರ್ ನ್ನು ವಂಡರಲಾ ಅಮ್ಯೂಸ್ಮೆಂಟ್ ಪಾರ್ಕ್ ಮೂರು ಮಹಾನಗರದ ಜನರಿಗೆ ನೀಡುತ್ತಿದೆ.

ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅಮೇರಿಕಾದಲ್ಲಿ ಮೊದಲ ಬಾರಿಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಖುಷಿಗೆ ವಂಡರಲಾ ಅಮ್ಯೂಸ್ ಮೆಂಟ್ ಪಾರ್ಕ್ ಕಮಲಾ ಎಂಬ ಹೆಸರಿನವರಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಿದೆ.

ಬೆಂಗಳೂರು,ಕೊಚ್ಚಿ ಹಾಗೂ ಹೈದ್ರಾಬಾದ್ ನ ವಂಡರಲಾ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಈ ಆಫರ್ ಲಭ್ಯವಿದ್ದು, ನಿಮ್ಮ ಹೆಸರು ಕಮಲಾ,ಕಮಲಮ್ ಅಥವಾ ಕಮಲ್ ಎಂದಿದ್ದರೇ ನೀವು ಈ ಭಾನುವಾರ ವಂಡರಲಾಗೆ ಫ್ರೀಯಾಗಿ ಪ್ರವೇಶ ಪಡೆಯಬಹುದು. ಆದರೆ ಇದಕ್ಕೆ ನಿಮಗೆ ಸ್ನೇಹಿತರು ಕರೆಯುವ ಹೆಸರಲ್ಲ, ನಿಮ್ಮ ತಂದೆ-ತಾಯಿ ಇಟ್ಟಿರುವ ಹೆಸರು ಕಮಲಾ ಎಂದಿರಬೇಕು.

ಕಮಲಾ ಎಂಬ ಹೆಸರಿನ ಸಾಕ್ಷಿಗೆ ನೀವೊಂದು ಪೋಟೋಐಡಿ ತೋರಿಸಿ ಈ ಆಫರ್ ಪಡೆದುಕೊಳ್ಳಬಹುದು. ಭಾನುವಾರ ಕೊಚ್ಚಿ,ಹೈದ್ರಾಬಾದ್ ಹಾಗೂ ಬೆಂಗಳೂರಿನ ವಂಡರಲಾದಲ್ಲಿ ಮೊದಲು ಬರುವ 100 ಜನರಿಗೆ ಈ ಆಫರ್ ಅನ್ವಯವಾಗಲಿದೆ.

ಸ್ವತಃ ವಂಡರಲಾ ಈ ವಿಚಾರವನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲಾ ಹ್ಯಾರೀಸ್ ಭಾರತೀಯರಾಗಿದ್ದು, ಭಾರತ ಮೂಲದಿಂದ ಅಮೇರಿಕಾದಲ್ಲಿ ಉನ್ನತ ಪದವಿ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ.