ಬೆಂಗಳೂರು : ಯಲಹಂಕದಲ್ಲಿ ನಡೆದ ಅನಿಲ ಆಧಾರಿತ ವಿದ್ಯುತ್ ಸ್ಥಾವರ (ವೈಸಿಸಿಪಿಪಿ)ದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 15 ಇಂಜಿನಿಯರ್ಗಳು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸುಮಾರು 370 ಮೆಗಾ ವಾಟ್ ಉತ್ಪಾದನಾ ಸಾಮರ್ಥ್ಯದ 1 ಘಟಕವನ್ನ ಕಾರ್ಯಾಚರಣೆ ನಡೆಸುವ ವೇಳೆ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಕೆಪಿಸಿಎಲ್ನ 11, ಬಿಎಚ್ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಇಂಜಿನಿಯರ್ಗಳು ಗಾಯಗೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಗಾಯಾಳುಗಳನ್ನ ಕೂಡಲೇ ಕೊಲಂಬಿಯಾ ಏಷಿಯಾ, ಮಲ್ಲಿಗೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.