Railway Department : ಮೋದಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.40 ಕೋಟಿ ರೂ.ಮೀಸಲು

ನವದೆಹಲಿ : ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆ (Railway Department) ಭರ್ಜರಿ ಆಫರ್‌ ನೀಡಿದ್ದಾರೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ 2.4 ಲಕ್ಷಕೋಟಿನ್ನು ರೈಲ್ವೆಗೆ ಮೀಸಲು ಇಡಲಾಗಿದೆ. ಇದು ರೈಲ್ವೆ ಇಲಾಖೆಗೆ ತನ್ನ ಇತಿಹಾಸದಲ್ಲೇ ಸಿಕ್ಕಿದಂತಹ ಅತೀ ಹೆಚ್ಚು ಮೊತ್ತವಾಗಿದೆ. ಸಚಿವೆ ಸೀತಾರಾಮನ್‌ ಬಜೆಟ್‌ ಮಂಡನೆ ವೇಳೆ ಈ ವಿಷಯ ತಿಳಿಸಿ, 2013-14ರ ಬಜೆಟ್‌ನಲ್ಲಿ ಕೊಡಲಾಗಿದ್ದಕ್ಕಿಂತ 9 ಪಟ್ಟು ಹೆಚ್ಚು ಮೊತ್ತವನ್ನು ಈ ಬಾರಿ ನೀಡಲಾಗಿದೆ ಎಂದು ಹೇಳಿದರು.

ಪ್ರಾದೇಶಿಕ ಸಂಪರ್ಕತೆ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು ಬಲಗೊಳಿಸುವ ಸಲುವಾಗಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈಲ್ವೆಗೆ ಸಿಕ್ಕಿರುವ 2.4ಲಕ್ಷರೂ ಹಣದಲ್ಲಿ 75ಸಾವಿರ ಕೋಟಿ ರೂ. ಹಣವನ್ನು ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ನೀಡಲಾಗುತ್ತದೆ. ಈ ಕ್ರಮದಿಂದ ರೈಲ್ವೆ ಇಲಾಖೆಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ ಈ ಬಜೆಟ್‌ನಿಂದಾಗಿ ವಂದೇ ಭಾರತ್‌ ರೈಲುಗಳ ಮೇಲೆ ಗಮನ ಕೊಡುವ ಸಾಧ್ಯತೆ ಇದೆ. ಈ ವರ್ಷದ ಆಗಸ್ಟ್‌ ತಿಂಗಳೊಳಗೆ 75 ವಂದೇ ಭಾರತ್‌ ರೈಲುಗಳನ್ನು ಹೊರಬಿಡಲು ರೈಲ್ವೆ ಇಲಾಖೆ ಯೋಜಿಸಿದೆ. ಹಾಗಾಗಿ ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಉತ್ತೇಜನ ಸಿಕ್ಕಂತೆ ಆಗಿದೆ.

ಇದನ್ನೂ ಓದಿ : ಮೋದಿ ಬಜೆಟ್‌ನಲ್ಲಿ ಹಿರಿಯ ನಾಗರಿಕರ ಉಳಿತಾಯ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳ

ಇದನ್ನೂ ಓದಿ : ಸರಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಇನ್ಮುಂದೆ ಪ್ಯಾನ್ ಸಾಕು

ಇದನ್ನೂ ಓದಿ : Automobile: ವಾಹನ ಖರೀದಿದಾರರಿಗೆ ಗುಡ್‌ ನ್ಯೂಸ್:‌ ಇವಿ ಕಾರುಗಳಿಗೆ ಬೆಲೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಲೋಕಸಭೆ ಚುನಾವಣೆಯ ಮೊದಲು ಮೋದಿ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಈ ಭಾರಿ ಬಜೆಟ್‌ ಮಂಡನೆಯಲ್ಲಿ ಹೆಚ್ಚಿನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗಿದೆ. ಹಾಗಾಗಿ ಈ ಬಾರಿ ಕೇಂದ್ರ ಬಜೆಟ್‌ ಎಲ್ಲಾ ರೀತಿಯಲ್ಲೂ ಎಲ್ಲಾ ವರ್ಗದವರಿಗೂ ಹೆಚ್ಚಿನ ಲಾಭವಾಗಲಿದೆ.

Railway Department: 2.4 crore rupees have been reserved for the railway department in the Modi budget

Comments are closed.