Union Budget 2023 Updates : ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡ ನಿಫ್ಟಿ, ಸೆನ್ಸೆಕ್ಸ್

ನವದೆಹಲಿ : ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಬಾರಿ ಬದಲಾವಣೆ (Union Budget 2023 Updates) ಕಂಡು ಬಂದಿದೆ. ನಿಫಿಟಿ, ಸೆನ್ಸೆಕ್ ಏರಿಕೆ ಕಂಡಿದೆ. ಹೂಡಿಕೆದಾರರು ಹೂಡಿಕೆಗೆ ಮನ ಮಾಡಿದ್ದಾರೆ. ಶೇರುಮಾರುಕಟ್ಟೆ ಏರಿಕೆ ಕಾಣುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ ಕಂಡಿದೆ.

ಈ ಬಾರಿಯ ಕೇಂದ್ರದ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮೂಲಸೌಕರ್ಯ, ದೀರ್ಘಾವಧಿಯ ಬೆಳವಣಿಗೆಗೆ ಸಹಾಯ ಮಾಡುವ ಯೋಜನೆಗಳ ಜೊತೆಗೆ ಸರ್ಕಾರದ ಹಣಕಾಸಿನ ಬಲವರ್ಧನೆ ಕೇಂದ್ರ ಸರಕಾರ ಅಗತ್ಯಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಇದೇ ನಿರೀಕ್ಷೆಯಲ್ಲೀಗ ಹೂಡಿಕೆದಾರರು ಹೂಡಿಕೆಗೆ ಮುಂದಾಗಿದ್ದಾರೆ. ಸಿಂಗಾಪುರ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾದ NSE ಸ್ಟಾಕ್ ಫ್ಯೂಚರ್ಸ್ 0.59% ರಷ್ಟು 17,857.50 ಕ್ಕೆ ತಲುಪಿದೆ. ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (NSE NIFTY) ಆರಂಭಿಕ ವಹಿವಾಟಿನಲ್ಲಿ 133 ಅಂಶಗಳ ಚೇತರಿಕೆ ಕಂಡಿದ್ದು 17,796 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ : Budget 2023 expectations: ಬಜೆಟ್‌ 2023: ಈ ಬಾರಿ ಕರ್ನಾಟಕದ ನಿರೀಕ್ಷೆಗಳೇನು?

ಇದನ್ನೂ ಓದಿ : Union Budget 2023 : ಬಜೆಟ್ ನಲ್ಲಿ ಸಿಗಲಿದ್ಯಾ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ಇದನ್ನೂ ಓದಿ : Union Budget 2023 : ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರದಿಂದ ಸಾಮಾನ್ಯ ಜನರ ನಿರೀಕ್ಷೆಗಳೇನು ?

ಇದನ್ನೂ ಓದಿ : Union Budget 2023 : ಆಟೋಮೊಬೈಲ್ ಕ್ಷೇತ್ರಕ್ಕೆ ಹಲವು ನಿರೀಕ್ಷೆ

ಇಂದು ಬೆಳಗ್ಗ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರ ಸರಕಾರ ಹೂಡಿಕೆಗೆ ಪ್ರೋತ್ಸಾಹ ನೀಡುವ ಜೊತೆಗೆ ಹಣಕಾಸಿನ ಕೊರತೆಯನ್ನು ಕಡಿಮೆ ಮಾಡಲು ಪ್ರಯತ್ನ ನಡೆಸುತ್ತಿದೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಮಂಡನೆ ಆಗುತ್ತಿರುವ ಬಜೆಟ್ ಇದಾಗಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಭಾರತವು 2023/24 ಹಣಕಾಸು ವರ್ಷದಲ್ಲಿ ತನ್ನ ಆರ್ಥಿಕ ಬೆಳವಣಿಗೆಯನ್ನು 6-6.8% ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ : 2024 ರ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯಾ ಈ ವರ್ಷದ ಬಜೆಟ್‌?

Union Budget 2023 Updates: Nifty, Sensex rose before the budget presentation

Comments are closed.