2022 GST Change Tax Ola Uber Price Hike : ಜಿಎಸ್‌ಟಿ ನಿಯಮ ಬದಲು, ಓಲಾ, ಉಬರ್, ಬಟ್ಟೆಗಳ ಬೆಲೆ ತುಟ್ಟಿ

2022ರಿಂದ ( January 1 2022 GST Change Tax) ಜನಸಾಮಾಮಾನ್ಯರ ಕಿಸೆಗೆ ಇನ್ನಷ್ಟು ಬಿಸಿ ತಾಗಲಿದೆ. ದಿನನಿತ್ಯದಲ್ಲಿ ಬಳಸುವ ಹಲವು ಸೇವೆಗಳು ಇನ್ನಷ್ಟು ದುಬಾರಿಯಾಗಲಿವೆ (Price Hike). ಇ-ಕಾಮರ್ಸ್​ ಸಂಸ್ಥೆಗಳು (E-Commerce) ಒದಗಿಸುವ ಸೇವೆಗಳಲ್ಲಿ  ಕಾರು (Car) ಅಥವಾ ಆಟೊರಿಕ್ಷಾ (Auto) ಸೇವೆಗೆ ಶೇ. 5ರಷ್ಟು ತೆರಿಗೆಯನ್ನು (Tax) ಸೇವೆ ಪಡೆದವರು ಪಾವತಿಸಬೇಕು. ಇದರಿಂದ ಓಲಾ, ಉಬರ್​ನಂತಹ ಇ-ಟ್ಯಾಕ್ಸಿ (Ola Uber Price Hike) ಸೇವೆಗಳು ದುಬಾರಿ ಆಗಲಿವೆ. ಈ ಮೊದಲು ಇದಕ್ಕೆ  ಜಿಎಸ್​ಟಿಯಿಂದ ವಿನಾಯಿತಿ (GST Relief) ಇತ್ತು.

ಪಾದರಕ್ಷೆ, ಜವಳಿಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಶೇ. 12ರ ಶ್ರೇಣಿ, ಮತ್ತು ಆ್ಯಪ್​ ಮೂಲಕ ಬುಕ್​ ಮಾಡುವ ಕಾರು, ಆಟೋಗಳಿಗೆ ಮತ್ತು ಆ್ಯಪ್​ಗಳ ಮೂಲಕ ತರಿಸಿಕೊಳ್ಳುವ  ಆಹಾರಕ್ಕೆ ಶೇ. 5 ಸೇವಾ ತೆರಿಗೆಯು ಜನವರಿ 1ರಿಂದ ಜಾರಿ ಆಗಲಿದೆ. ಇದರೊಟ್ಟಿಗೆ ಜಿಎಸ್​ಟಿಯ ಕೆಲವು ಪ್ರಕ್ರಿಯೆಯ ನಿಯಮಗಳು ಇದೇ ದಿನಾಂಕದಿಂದ ಚಾಲ್ತಿಗೆ ಬರಲಿದೆ. ಒಂದು ಸಾವಿರ ರೂಪಾಯಿ ಒಳಗಿನ ಚಪ್ಪಲಿಗೆ ಹಾಗೂ ಅರಳೆ ವಸ್ತ್ರ  ಬಿಟ್ಟು ಉಳಿದ ಜವಳಿ ಉತ್ಪನ್ನ ಮತ್ತು ಸಿದ್ಧ ಉಡುಪುಗಳಿಗೆ ಶೇ. 12 ಜಿಎಸ್​ಟಿ ವಿಧಿಸಲಾಗುತ್ತದೆ.

ಜನವರಿ 2022 ರಿಂದ ಈ ವಸ್ತುಗಳು ಇನ್ನಷ್ಟು ದುಬಾರಿ
ಸ್ವಿಗ್ಗಿ, ಜೊಮ್ಯಾಟೋದಲ್ಲಿ ಆಹಾರ ಬುಕಿಂಗ್‌ ಶೇ. 5
ಆ್ಯಪ್‌ ಮೂಲಕ ಆಟೋ ಕಾರು ಬುಕಿಂಗ್‌ ಶೇ. 5
ಎಲ್ಲಾ ಮಾದರಿಯ ಪಾದರಕ್ಷೆಗಳು ಶೇ. 12
ರೆಡಿಮೇಡ್‌ ಸೇರಿ ಎಲ್ಲಾ ಬಟ್ಟೆಗಳು (ಕಾಟನ್‌ ಬಟ್ಟೆಬಿಟ್ಟು) ಶೇ. 12

ಆ್ಯಪ್​ಗಳ ಆಧಾರಿತವಾಗಿ ಆರ್ಡರ್​ ಮಾಡಿ ತರಿಸಿಕೊಳ್ಳುವ ಆಹಾರಕ್ಕೂ  ಶೇ. 5 ಸೇವಾ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಸ್ವಿಗ್ಗಿ, ಜೊಮ್ಯಾಟೊಗಳಂಥ ಆ್ಯಪ್​ಗಳು ಈ ಸೇವೆ ಪಡೆದ ಗ್ರಾಹಕರಿಗೆ ರಸೀದಿ ನೀಡಬೇಕಾಗುತ್ತದೆ. ಜಿಎಸ್​ಟಿ ಮರುಪಾವತಿಗೆ ಆಧಾರ್​ ದೃಢೀಕರಣ ಕಡ್ಡಾಯವಾಗಲಿದ್ದು, ಜಿಎಸ್​ಟಿಆರ್​-3ಬಿ ಮತ್ತು ಜಿಎಸ್​ಟಿಆರ್​-1 ಸಲ್ಲಿಕೆಯ ನಿಯಮದಲ್ಲಿ ಬದಲಾವಣೆಗಳು ಜನವರಿ 1ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ನಿಯಮದಿಂದ ನಕಲಿ ಬಿಲ್​ ಸೃಷ್ಟಿ ನಡೆಯುವ ವಂಚನೆಗೆ ಕಡಿವಾಣ ಬೀಳಲಿದೆ.

ಈಮುನ್ನ ಮತ್ತು ಪ್ರಸ್ತುತ ಆ್ಯಪ್‌ ಮೂಲಕ ತಿಂಡಿ-ತಿನಿಸುಗಳನ್ನು ಗ್ರಾಹಕರಿಂದ ಹೋಟೆಲ್‌ಗಳು ಜಿಎಸ್‌ಟಿ ಸಂಗ್ರಹಿಸುತ್ತಿದ್ದವು. ಆದರೆ ಇದರ ಬದಲು ಇನ್ನುಮುಂದೆ ಸ್ವಿಗ್ವಿ, ಝೊಮ್ಯಾಟೋಗಳು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಹೀಗಾಗಿ ಜಿಎಸ್‌ಟಿ ನೆಪದಲ್ಲಿ ಈ ಕಂಪನಿಗಳು ಶುಲ್ಕದ ನೆಪದಲ್ಲಿ ಮತ್ತಷ್ಟು ವಸೂಲಿ ಮಾಡಬಹುದಾಗಿದೆ. ಇದು ಗ್ರಾಹಕರ ಮೇಲೆ ಇನ್ನಷ್ಟು ಬೆಲೆ ಹೆಚ್ಛಳದ ಬಿಸಿಯನ್ನು ಹಾಕಲಿದೆ.

ಇದನ್ನೂ ಓದಿ: Bitcoin Future : 1000 ಬಿಟ್ ಕಾಯಿನ್ ಖರೀದಿಸಿರುವ ಈ ದೇಶದ ಅಧ್ಯಕ್ಷರು ಡಾಲರ್‌ಗೆ ಭವಿಷ್ಯವಿಲ್ಲ ಎಂದಿದ್ದೇಕೆ?

( 2022 GST Tax Rate change tax rate from January 1 2022 Ola Uber Price Hike)

Comments are closed.