500rs Bank note missing : 500 ರೂ. ಮುಖಬೆಲೆಯ ನೋಟುಗಳು ನಾಪತ್ತೆಯಾಗಿಲ್ಲ : RBI ಸ್ಪಷ್ಟನೆ

ಮುಂಬೈ: 500rs Bank note missing : 88,032.5 ಕೋಟಿ ರೂ. ಮೌಲ್ಯದ 1,760.65 ಮಿಲಿಯನ್ 500ರೂ. ನೋಟುಗಳು ನಾಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿದ ಬೆನ್ನಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಷ್ಟನೆಯನ್ನು ನೀಡಿದ್ದು, ಮಾಧ್ಯಮಗಳ ವರದಿಯನ್ನು ನಿರಾಕರಿಸಿದೆ. 2015-16ರ ಅವಧಿಯಲ್ಲಿ ಮುದ್ರಿಸಲಾದ ನೋಟುಗಳ ಪ್ರಮಾಣ ಮತ್ತು ಆರ್‌ಬಿಐಗೆ ಸರಬರಾಜು ಮಾಡಿದ ಮೊತ್ತದ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲೆ ಎಂದಿದೆ. ಅಲ್ಲದೇ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿರುವ ವರದಿಗಳು ತಪ್ಪಾಗಿದೆ ಎಂದು ಆರ್‌ಬಿಐ ಹೇಳಿದೆ/

ಆರ್‌ಬಿಐ ನೀಡಿರುವ ಹೇಳಿಕೆಯ ಪ್ರಕಾರ, ನೋಟುಗಳ ಮುದ್ರಣಾಲಯದಿಂದ ಪಡೆದುಕೊಂಡಿರುವ ಮಾಹಿತಿ ಹಕ್ಕು ಕಾಯಿದೆ 2005 ರ ಮೂಲಕ ಪಡೆದ ಮಾಹಿತಿಯಲ್ಲಿನ ತಪ್ಪಾದ ವ್ಯಾಖ್ಯಾನದಿಂದ ಈ ವಿವಾದ ಸೃಷ್ಟಿಯಾಗಿದೆ. ಪ್ರಿಂಟಿಂಗ್ ಪ್ರೆಸ್‌ಗಳಿಂದ ಸೆಂಟ್ರಲ್ ಬ್ಯಾಂಕ್‌ಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳನ್ನು ಸರಿಯಾಗಿ ಲೆಕ್ಕಹಾಕಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅಲ್ಲದೇ ಮುದ್ರಣಾಲಯಗಳಲ್ಲಿ ಮುದ್ರಿಸಲಾದ ಮತ್ತು ಆರ್‌ಬಿಐಗೆ ಸರಬರಾಜು ಮಾಡಲಾದ ನೋಟುಗಳ ಸಮನ್ವಯವನ್ನು ಖಚಿತಪಡಿಸಿ ಕೊಳ್ಳಲು ದೃಢವಾದ ವ್ಯವಸ್ಥೆಗಳು ಜಾರಿಯಲ್ಲಿವೆ. ಈ ವ್ಯವಸ್ಥೆಗಳು ಬ್ಯಾಂಕ್ನೋಟುಗಳ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಪ್ರೋಟೋ ಕಾಲ್‌ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ.ಮುದ್ರಣಗೊಂಡ ನೋಟುಗಳ ಪ್ರಮಾಣ ಮತ್ತು ಬ್ಯಾಂಕ್‌ಗೆ ಬಂದಿರುವ ನೋಟುಗಳ ಪ್ರಮಾಣಕ್ಕೆ ವ್ಯತ್ಯಾಸವಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

500rs Bank note missing : ಏನಿದು ವಿವಾದ ?

ಭಾರತೀಯ ಆರ್ಥಿಕತೆಯಿಂದ 88,032.5 ಕೋಟಿ ರೂ. ಮೌಲ್ಯದ 1,760.65 ಮಿಲಿಯನ್ 500ರೂ. ನೋಟುಗಳು ನಾಪತ್ತೆಯಾಗಿವೆ ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಅಲ್ಲದೇ ಆರ್‌ಬಿಐ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಪತ್ತೆಯಾದ 500ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2022-23ರಲ್ಲಿ 91,110 ತುಣುಕುಗಳಿಗೆ 14.4 ಶೇಕಡಾ ಹೆಚ್ಚಾಗಿದೆ ಎಂದು ಹೇಳಿದೆ. ಅಲ್ಲದೇ ಭಾರತೀಯ ಆರ್ಥಿಕತೆಯಲ್ಲಿ 88,032.5 ಕೋಟಿ ರೂಪಾಯಿ ಮೌಲ್ಯದ 500 ರೂಪಾಯಿ ನೋಟುಗಳು ನಾಪತ್ತೆಯಾಗಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್ ರಾಯ್ ಅವರು ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಐ) ಈ ಮಾಹಿತಿ ಬಹಿರಂಗವಾಗಿದೆ.

500 ರೂಪಾಯಿ ಮುಖಬೆಲೆಯ 8,810.65 ಹಣವನ್ನು ಆರ್‌ಬಿಐ ಮುದ್ರಿಸಿತ್ತು. ಆದರೆ ಆರ್‌ಬಿಐ ಕೇವಲ 7,260 ಮಿಲಿಯನ್ ಅನ್ನು ಮಾತ್ರ ಸ್ವೀಕರಿಸಿದೆ. 88,032.5 ಕೋಟಿ ಮೌಲ್ಯದ 1,760.65 ಮಿಲಿಯನ್ 500 ನೋಟುಗಳ ಮಾಹಿತಿಯು ಎಲ್ಲಿಯೂ ಪತ್ತೆಯಾಗಿಲ್ಲ ರಾಯ್‌ ತಿಳಿಸಿದ್ದರು. ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ (ಪಿ) ಲಿಮಿಟೆಡ್, ನಾಸಿಕ್‌ನಲ್ಲಿರುವ ಕರೆನ್ಸಿ ನೋಟ್ ಪ್ರೆಸ್ ಮತ್ತು ಬ್ಯಾಂಕ್ ನೋಟ್ ಪ್ರೆಸ್, ಮಧ್ಯಪ್ರದೇಶದ ದೇವಾಸ್ ಗಳಲ್ಲಿ ಆರ್‌ಬಿಐ ನೋಟುಗಳನ್ನು ಮುದ್ರಣ ಮಾಡುತ್ತಿದೆ.ಆರ್‌ಟಿಐನಲ್ಲಿ ನಾಸಿಕ್ ಮುದ್ರಣಾಲಯದಿಂದ 2016-2017ರಲ್ಲಿ ಆರ್‌ಬಿಐಗೆ 1,662.000 ಮಿಲಿಯನ್, ಬೆಂಗಳೂರು ಮುದ್ರಣಾಲಯದಿಂದ 5,195.65 ಮಿಲಿಯನ್ ಹಾಗೂ ದೇವಾಸ್ ಮುದ್ರಣಾಲಯ ಆರ್‌ಬಿಐಗೆ 1,953.000 ಮಿಲಿಯನ್ ನೋಟುಗಳನ್ನು ಮುದ್ರಣ ಮಾಡಿದೆ. ಮೂರು ಟಂಕಸಾಲೆಗಳಿಂದ ಸರಬರಾಜು ಮಾಡಲಾದ ನೋಟುಗಳ ಒಟ್ಟು ಮೊತ್ತವು 8,810.65 ಮಿಲಿಯನ್ ತುಣುಕುಗಳವೆ. ಆದರೆ ಆರ್‌ಬಿಐ 500 ರೂ. ಮುಖಬೆಲೆಯ ನೋಟುಗಳ 7260 ಮಿಲಿಯನ್ ತುಣುಕುಗಳನ್ನು ಮಾತ್ರ ಸ್ವೀಕರಿಸಿದೆ ಎಂದಿದ್ದಾರೆ.

ಆರ್‌ಟಿಐನಿಂದ ಪಡೆದ ಮಾಹಿತಿಯ ಪ್ರಕಾರ, ಏಪ್ರಿಲ್ 2015-ಡಿಸೆಂಬರ್ 2016 ರ ನಡುವೆ, ನಾಸಿಕ್‌ನಲ್ಲಿರುವ ಕರೆನ್ಸಿ ನೋಟ್ ಪ್ರೆಸ್ ಹೊಸದಾಗಿ ವಿನ್ಯಾಸಗೊಳಿಸಲಾದ ₹500 ನೋಟುಗಳ 375.450 ಮಿಲಿಯನ್ ತುಣುಕುಗಳನ್ನು ಮುದ್ರಿಸಿದೆ, ಆದಾಗ್ಯೂ, ಆರ್‌ಬಿಐ ಕೇವಲ 345.000 ಮಿಲಿಯನ್ ತುಣುಕುಗಳ ದಾಖಲೆಯನ್ನು ಹೊಂದಿದೆ. 1760.65 ಮಿಲಿಯನ್ ಕಾಣೆಯಾದ ನೋಟುಗಳಲ್ಲಿ, 210 ಮಿಲಿಯನ್ ತುಣುಕುಗಳನ್ನು ಏಪ್ರಿಲ್ 2015-ಮಾರ್ಚ್ 2016 ರ ಅವಧಿಯಲ್ಲಿ ನಾಸಿಕ್ ಮಿಂಟ್‌ನಲ್ಲಿ ಮುದ್ರಿಸಲಾಗಿದೆ, ಆದಾಗ್ಯೂ, ಆರ್‌ಟಿಐ ಪ್ರಕಾರ, ಈ ನೋಟುಗಳನ್ನು ರಘುರಾಮ್ ರಾಜನ್ ಗವರ್ನರ್ ಆಗಿದ್ದಾಗ ಆರ್‌ಬಿಐಗೆ ಸರಬರಾಜು ಮಾಡಲಾಗಿದ. ಈ ವ್ಯತ್ಯಾಸವನ್ನು ತನಿಖೆ ಮಾಡಲು ರಾಯ್ ಅವರು ಸೆಂಟ್ರಲ್ ಎಕನಾಮಿಕ್ ಇಂಟೆಲಿಜೆನ್ಸ್ ಬ್ಯೂರೋ (CEIB) ಮತ್ತು ED ಗೆ ಪತ್ರ ಬರೆದಿದ್ದಾರೆ ಎಂದು ವರದಿ ಮಾಡಿದೆ. ಆದರೆ ಕೆಲವು ಹಿರಿಯ ಆರ್‌ಬಿಐ ಅಧಿಕಾರಿಗಳು ಕರೆನ್ಸಿ ನೋಟುಗಳ ಮುದ್ರಣ ಮತ್ತು ಸರಬರಾಜಿನಲ್ಲಿ ತೊಡಗಿರುವ ಬೃಹತ್ ಲಾಜಿಸ್ಟಿಕ್ಸ್‌ಗೆ ಈ ಅಸಂಗತತೆಯನ್ನು ಸಮರ್ಥಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇನ್ನು ಆರ್‌ಬಿಐ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು ಮತ್ತು ಪತ್ತೆಯಾದ ₹ 500 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23 ರಲ್ಲಿ 91,110 ತುಣುಕುಗಳಿಗೆ 14.4 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಇದೇ ಅವಧಿಯಲ್ಲಿ ಪತ್ತೆಯಾದ ₹ 2,000 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ₹ 9,806 ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.ಮೇ 19 ರ ಸುತ್ತೋಲೆಯಲ್ಲಿ ಆರ್‌ಬಿಐ ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಳ್ಳುವುದಾಗಿ ಘೋಷಿಸಿತು. ತಕ್ಷಣವೇ ಜಾರಿಗೆ ಬರುವಂತೆ ₹2000 ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. 2023ರ ಸೆಪ್ಟೆಂಬರ್ 30ರ ಒಳಗೆ ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಆರ್‌ಬಿಐ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : Coffee Prices Rise : ಕಾಫಿಗೆ ಬಂತು ದಾಖಲೆಯ ಬೆಲೆ, ಬೆಳೆಗಾರರಿಗೆ ಖುಷಿ : 39,800 ಟನ್‌ ಕಾಫಿ ರಫ್ತು

ಇದನ್ನೂ ಓದಿ : Aadhaar online update : ಆಧಾರ್‌ ಉಚಿತ ಅಪ್ಡೇಟ್‌, 3 ತಿಂಗಳು ಕಾಲಾವಕಾಶ ವಿಸ್ತರಣೆ

500rs Bank note missing is Misinterpretation info says RBI

Comments are closed.