75 Rs. Coin release : ಸಂಸತ್‌ ಭವನ ಉದ್ಘಾಟನೆ ವೇಳೆ 75 ರೂ. ನಾಣ್ಯ ಬಿಡುಗಡೆ : ನಾಣ್ಯಕ್ಕೆ ತಗುಲಿದ ವೆಚ್ಚವೆಷ್ಟು, ಎಲ್ಲಿ ಸಿಗುತ್ತೆ ನಾಣ್ಯ ?

ನವದೆಹಲಿ : ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು 75 ರೂ. ನಾಣ್ಯ (75 Rs. Coin release) ಬಿಡುಗಡೆ ಮಾಡಿದ್ದರು. ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿನ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಪ್ರಕಾರ, ಹೊಸ 75 ರೂಪಾಯಿ ನಾಣ್ಯದ ತೂಕವು ಸುಮಾರು 35 ಗ್ರಾಂ ಆಗಿರುತ್ತದೆ. ಇನ್ನು ಈ ನಾಣ್ಯಗಳನ್ನು ತಯಾರಿಸಲು ಎಷ್ಟು ವೆಚ್ಚ ತಗುಲಿದೆ ಹಾಗೂ ಅದು ಎಲ್ಲಿ ಸಿಗುತ್ತದೆ ಎನ್ನುವುದು ಕುತೂಹಲಕಾರಿ ಮಾಹಿತಿ ಇಲ್ಲಿದೆ.

75 ರೂ. ಪಾವತಿ ಮಾಡುವ ಮೂಲಕ ಜನಸಾಮಾನ್ಯರು 75ರೂಪಾಯಿಯ ನಾಣ್ಯವನ್ನು ಪಡೆಯಲು ಸಾಧ್ಯವಿಲ್ಲ. ನಾಣ್ಯವನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಅನ್ನುವ ಕುರಿತು www.indiagovtmint.in ಪರಿಶೀಲನೆಯನ್ನು ನಡೆಸಬಹುದಾಗಿದೆ. ಆದರೆ ಸದ್ಯಕ್ಕೆ 75 ರೂ. ನಾಣ್ಯದ ಬೆಲೆಯನ್ನು ಇನ್ನೂ ಹಣಕಾಸು ಸಚಿವಾಲಯ ಪಟ್ಟಿ ಮಾಡಿಲ್ಲ. ಶೀಘ್ರದಲ್ಲಿಯೇ ಅದರ ಬೆಲೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : HDFC Bank Bulk FD Rates : HDFC ಬ್ಯಾಂಕ್ ಗ್ರಾಹಕರ ಗಮನಕ್ಕೆ : ಕಡಿಮೆ ಅವಧಿ ಎಫ್‌ಡಿಗಳಿಗೆ ಶೇ. 7.25ರಷ್ಟು ಬಡ್ಡಿದರ

ಈ ಹಿಂದೆ ಖ್ಯಾತ ಭಾರತೀಯ ಭೌತಶಾಸ್ತ್ರಜ್ಞ ಡಾ ಹೋಮಿ ಜೆ ಬಾಬಾ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಸರಕಾರ 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿತ್ತು. ಈ ನಾಣ್ಯದ ಬೆಲೆ 18,561 ರೂಪಾಯಿ ಎಂದು ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 150 ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ಕುಕಾ ಚಳುವಳಿಯನ್ನು ಬಾಬಾ ರಾಮ್‌ ಸಿಂಗ್‌ ಆರಂಭಿಸಿದ್ದರು. ಕುಕಾ ಚಳುವಳಿಯ ನೆನಪಿನಲ್ಲಿ ಬಿಡುಗಡೆ ಮಾಡಲಾದ ರೂ 150 ನಾಣ್ಯದ ಬೆಲೆಯನ್ನು ಸರಕಾರ 10,735 ರೂ. ಎಂದು ಘೋಷಣೆ ಮಾಡಿದೆ. ಇದೀಗ ಸರಕಾರ ಬಿಡುಗಡೆ ಮಾಡಿರುವ ಹೊಸ ನಾಣ್ಯದ ಬೆಲೆ ಎಷ್ಟಿರಬಹುದು ಅನ್ನೋದು ಕುತೂಹಲ ಮೂಡಿಸಿದೆ.

75 Rs. Coin release: Rs 75 during the inauguration of Parliament House. Coin release: How much does the coin cost, where can you get the coin?

Comments are closed.