7th Pay Commission News : ಶೀಘ್ರದಲ್ಲೇ ರಾಜ್ಯದಲ್ಲಿ 6,000 ಕೋಟಿ ರೂ. 7ನೇ ವೇತನ ಆಯೋಗ ಜಾರಿ

ಬೆಂಗಳೂರು : ರಾಜ್ಯ ಬಜೆಟ್‌ನ ಮಂಡನೆಯಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಕಾದಿದೆ. ಕರ್ನಾಟಕ ಸರಕಾರವು 7ನೇ ವೇತನ ಆಯೋಗವನ್ನು (7th Pay Commission News) ಜಾರಿಗೆ ತರಲು ಯೋಜಿಸುತ್ತಿದ್ದು, ಅದರ ಅನುಷ್ಠಾನಕ್ಕಾಗಿ ತಮ್ಮ ಆಡಳಿತವು 6,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಇದ್ದರಿಂದ ಹೆಚ್ಚಿನ ಸರಕಾರಿ ನೌಕರರು ತಮ್ಮ ವೇತನದಲ್ಲಿ ಮಹತ್ವದ ಬದಲಾವಣೆಯನ್ನು ಪಡೆಯಬಹುದಾಗಿದೆ.

ಸಿಎಂ ಬಸವರಾಜ್‌ ಬೊಮ್ಮಾಯಿ, “ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿಯು 7 ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಲಿದೆ” ಎಂದು ಹೇಳಿದರು. ಹಣಕಾಸು ವರ್ಷ 2023-24 ರ ರಾಜ್ಯ ಬಜೆಟ್ ಅನ್ನು ಮಂಡಿಸಿದ ನಂತರ, ಅನುಷ್ಠಾನಕ್ಕೆ ಅಗತ್ಯವಿರುವ ಯಾವುದೇ ಹೆಚ್ಚುವರಿ ಮೊತ್ತವನ್ನು ಪೂರಕ ಬಜೆಟ್‌ನಲ್ಲಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ : ವಿದೇಶಿ ಪ್ರಯಾಣ ಮಾಡಲು ಬಯಸುತ್ತಿದ್ದೀರಾ ? ಈಗ ಕೇವಲ 5 ದಿನಗಳಲ್ಲಿ ನಿಮ್ಮ ಪಾಸ್‌ಪೋರ್ಟ್‌ ಲಭ್ಯ

ಇದನ್ನೂ ಓದಿ : LPG Cylinder Price : ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌ : ಸರಕಾರದ ಈ ಯೋಜನೆಯಡಿ ಅರ್ಧ ದರದಲ್ಲಿ 14.2 ಕೆಜಿ ಸಿಲಿಂಡರ್ ಲಭ್ಯ

ಇದನ್ನೂ ಓದಿ : Aadhaar Mitra : ಯುಐಡಿಎಐನಿಂದ ಆಧಾರ್ ಮಿತ್ರ ಪ್ರಾರಂಭ : ಆಧಾರ್ ಕಾರ್ಡ್ ಸ್ಥಿತಿ, ದೂರುಗಳನ್ನು ನೋಂದಾಯಿಸುವುದು ಹೇಗೆ ಗೊತ್ತಾ ?

ಸರಕಾರಿ ನೌಕಕರ 7ನೇ ವೇತನ ಆಯೋಗ ಬಗ್ಗೆ ವಿವರಗಳನ್ನು ನೀಡಿದ ಮುಖ್ಯಮಂತ್ರಿಗಳು, ಹಣಕಾಸು ವರ್ಷ 2023-24ನೇ ಸಾಲಿನಿಂದಲೇ 7ನೇ ವೇತನ ಆಯೋಗದ ವರದಿ ಜಾರಿಯಾಗಲಿದೆ ಎಂದು ಅವರು ತಿಳಿಸಿದರು. “ಸಮಿತಿಯು ತನ್ನ ಮಧ್ಯಂತರ ಅಥವಾ ಅಂತಿಮ ವರದಿಯನ್ನು ಪ್ರಸ್ತುತ ಪಡಿಸಲಿ, ರಾಜ್ಯ ಸರಕಾರವು ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದರಿಂದ ಅನುಷ್ಠಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ : Payrm LIC Premium : ಎಲ್‌ಐಸಿ ವಿಮಾ ಪ್ರೀಮಿಯಂನ್ನು ಪೇಟಿಎಂ ಮೂಲಕ ಪಾವತಿಸಲು ಬಯಸುವಿರಾ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

7th Pay Commission News : Soon Rs 6,000 crore in the state. Implementation of 7th Pay Commission

Comments are closed.