Debit Card ಮರೆತಿದ್ರೆ ಚಿಂತೆ ಬೇಡ : ಆಧಾರ್ ಸಂಖ್ಯೆ ಬಳಸಿ ಖಾತೆಯಿಂದ ಹಣ ಡ್ರಾ ಮಾಡಿ

ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರ, ಎಟಿಎಮ್ ಕಾರ್ಡ್ ಅಥವಾ ಅದರ ಪಿನ್‌ನ್ನು ಮರೆತು ಹೋಗಿದ್ದೀರಾ? ಹಾಗಾಗಿ ಬ್ಯಾಂಕ್ ಖಾತೆಯಲ್ಲಿ ಹಣವನ್ನು ತೆಗೆಯಲು ಹೆಣಗಾಡುತ್ತಿದ್ದೀರಾ? ಇಂತಹ ಸಮಯದಲ್ಲಿ ನಿಮ್ಮ ಬಳಿ ಆಧಾರ್ ನಂಬರ್‌ ಒಂದಿದ್ದರೆ ಸಾಕು. ನಿಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಯಾವುದೇ ಶುಲ್ಕವಿಲ್ಲದೇ ಸುಲಭ ರೀತಿಯಲ್ಲಿ ಪಡೆಯಬಹುದು. ಈ ಸೌಲಭ್ಯ ಎಲ್ಲಾ ಪೋಸ್ಟ್ ಆಫೀಸ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ನೀವು ಇಂತಹ ಸಮಯದಲ್ಲಿ ನಿಮ್ಮ ಹತ್ತಿರದ ಪೋಸ್ಟ್‌ನಲ್ಲಿ ಕೇವಲ ಆಧಾರ್ ನಂಬರ್‌ ಮೂಲಕ ಖಾತೆಯಲ್ಲಿ ಇರುವ ಹಣವನ್ನು ಕೂಡಲೇ ಪಡೆಯಬಹುದು. ಈ ಸೌಲಭ್ಯಕ್ಕೆ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (Aadhaar Enabled Payment System) ಎನ್ನಲಾಗುತ್ತದೆ.

ಇದೊಂದು ಬಯೋ ಮೆಟ್ರಿಕ್ ಸಿಸ್ಟಮ್ ಆಗಿದ್ದು, ಇದು ಆಧಾರ್‌ ಮುಖಾಂತರ ಮಾಡುವಂತಹ ವಹಿವಾಟು ಆಗಿರುತ್ತಾರೆ. ಇದರಲ್ಲಿ ಕೇವಲ ವ್ಯಕ್ತಿಯ ಆಧಾರ್ ನಂಬರ್ ಹಾಗೂ ಬೆರಳಚ್ಚು ಬಳಸಿಕೊಂಡು ವ್ಯಕ್ತಿಯ ಖಾತೆಯಲ್ಲಿ ಇರುವ ಹಣವನ್ನು ಯಾವುದೇ ಶುಲ್ಕವಿಲ್ಲದೇ ಪೋಸ್ಟ್ ಆಫೀಸ್‌ನಲ್ಲಿ ಪಡೆಯಬಹುದಾಗಿದೆ. ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (Aadhaar Enabled Payment System)ಯು ಪಾವತಿ ಸೇವೆಯಾಗಿದ್ದು, ಬ್ಯಾಂಕ್ ಗ್ರಾಹಕನು ತನ್ನ ಆಧಾರ್ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಆಧಾರ್‌ನ್ನು ತನ್ನ ಗುರುತಾಗಿ ಬಳಸಲು ಅನುಮತಿಸುತ್ತದೆ. ಬ್ಯಾಲೆನ್ಸ್ ವಿಚಾರಣೆ, ನಗದು ಹಿಂಪಡೆಯುವಿಕೆ, ವ್ಯಾಪಾರ ಮೂಲಕ ಹಣ ರವಾನೆಗಳಂತಹ ಮೂಲಭೂತ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸುತ್ತದೆ.

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (Aadhaar Enabled Payment System) ನಿಂದ ನೀಡಲಾಗುವ ಬ್ಯಾಂಕಿಂಗ್ ಸೇವೆಗಳ ವಿವರ :

  • ಇದರಲ್ಲಿ ನಗದು ಹಣವನ್ನು ನಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಬಹುದು.
  • ನಮ್ಮ ಯಾವುದೇ ಬ್ಯಾಂಕ್‌ ಖಾತೆಯಲ್ಲಿ ಇರುವ ಹಣವನ್ನು ತೆಗೆಯಬಹುದು.
  • ಇದರಲ್ಲಿ ನಮ್ಮ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಚೆಕ್ ಮಾಡಬಹುದು.
  • ನೀವು ನಿಮ್ಮ ಬ್ಯಾಂಕ್ ಖಾತೆ ವಿವರ, ಎಟಿಮ್ ಕಾರ್ಡ್ ಅಥವಾ ಪಿನ್ ಗಳನ್ನು ಕಳೆದುಕೊಂಡಾಗ ಅಥವಾ ಮರೆತು ಹೋದಾಗ ಪೋಸ್ಟ್ ಆಫೀಸ್ ನ ಈ ಸೌಲಭ್ಯದ ಮೂಲಕ ಹಣವನ್ನು ಪಡೆಯಬಹುದು.

ಈ ಸೌಲಭ್ಯದಿಂದ ಗ್ರಾಹಕರು ಹಣ ತೆಗೆಯಲು ಬೇಕಾಗುವ ವಿವರ :

  • ಗ್ರಾಹಕರು ತಾವು ಹಣ ಪಡೆಯುವ ಬ್ಯಾಂಕ್ ಹೆಸರನ್ನು ತಿಳಿಸಬೇಕಾಗುತ್ತದೆ.
  • ಗ್ರಾಹಕರ ಆಧಾರ್ ಸಂಖ್ಯೆ ಮುಖ್ಯವಾಗಿ ಬೇಕಾಗುತ್ತದೆ.
  • ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ತೆಗೆಯು ಸಮಯದಲ್ಲಿ ಬೆರಳಚ್ಚು ಪಡೆಯಲಾಗುತ್ತದೆ.

ಇದನ್ನೂ ಓದಿ : ಗ್ರಾಹಕರ ಗಮನಕ್ಕೆ : 2 ದಿನ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ

ಇದನ್ನೂ ಓದಿ : EPFO Website Down : ಇಪಿಎಫ್ಒ ಚಂದಾದಾರರಿಗೆ ಇ-ಪಾಸ್ ಬುಕ್ ಸೌಲಭ್ಯದಲ್ಲಿ ವ್ಯತ್ಯಯ

ಇದನ್ನೂ ಓದಿ : ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಪಟ್ಟಿ 2023 : ಭಾರತಕ್ಕೆ ಎಷ್ಟನೇ ಸ್ಥಾನ ?

ಸೂಚನೆ : ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (Aadhaar Enabled Payment System)ಯಲ್ಲಿ ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಮಾತ್ರ ಪ್ರತಿ ವಹಿವಾಟಿಗೆ 35 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನುಳಿದಂತೆ ಬೇರೆ ಯಾವ ಬ್ಯಾಂಕ್‌ ಗ್ರಾಹಕರಿಗೂ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.

Aadhaar Enabled Payment System : Don’t worry if you forget Debit Card: Withdraw money from account using Aadhaar number

Comments are closed.