ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಖಾತೆದಾರರಿಗೆ SBI YONO ಮತ್ತುSBI YONO Lite ನಂತಹ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಅನೇಕ ಸೇವೆಗಳನ್ನು ಒದಗಿಸುತ್ತಿದೆ (Add Beneficiary in SBI YONO). ಈ ಎರಡೂ ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಹಣ ಕಳುಹಿಸುವುದು ಮತ್ತು ಪಡೆಯುವುದು, ಬಿಲ್ ಪಾವತಿಸಲು, ಟಾಪ್–ಅಪ್ ರಿಚಾರ್ಜ್ ಮಾಡುವಂತಹ ಹಲವು ಸೌಲಭ್ಯಗಳಿವೆ. ಖಾತೆದಾರರು ಈ ಆಪ್ ಮೂಲಕ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಬಹುದು. ಜೊತೆಗೆ ‘ಇ–ಪಾಸ್‌ಬುಕ್’ ಮೂಲಕ ನಾವು ಮಾಡಿದ ವಹಿವಾಟುಗಳನ್ನು ನೋಡಿಕೊಳ್ಳಬಹುದು.
ಈ ಆಪ್ ನಿಮ್ಮ ಖಾತೆಗೆ ಬೆನಿಫಿಷಿಯರಿಗಳನ್ನು ಸೇರಿಸಿಕೊಳ್ಳವ ಅವಕಾಶವನ್ನು ನೀಡಿದೆ. ಹಣ ಸಂದಾಯ ಮಾಡಲು ಬಯಸುವ ವ್ಯಕ್ತಿಗಳ ಖಾತೆ ಸಂಖ್ಯೆಯನ್ನು ಬೆನಿಫಿಷಿಯರಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನೀವು ಸುಲಭ ಮತ್ತು ತ್ವರಿತವಾಗಿ ಹಣ ಪಾವತಿಸಬಹುದಾಗಿದೆ. ಬೆನಿಫಿಷಿಯರಿಯಲ್ಲಿ ವ್ಯಕ್ತಿಗಳನ್ನು ಸೇರಿಸುವ ಮಾಹಿತಿ ಇಲ್ಲಿದೆ:
ಇದನ್ನೂ ಓದಿ : Bank Holiday July 2022 : ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ
SBI YONO ದಲ್ಲಿ ಬೆನಿಫಿಷಿಯರಿಗಳನ್ನು ಸೇರಿಸಿಕೊಳ್ಳುವುದು ಹೇಗೆ?
ಮೊದಲಿಗೆ SBI YONO ಆಪ್‌ನ ಹೊಸ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಈ ಕೆಳಗಿನ ಸ್ಟೆಪ್ಸ್ ಅನುಸರಿಸಿ.
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ SBI YONO ಆಪ್ ತೆರೆಯಿರಿ.
- MPIN ಅಥವಾ ಯುಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡುವುದರ ಮೂಲಕ ಲಾಗಿನ್ ಆಗಿ.
- ಬ್ಯಾಂಕ್ ಅಕೌಂಟ್‌ನಲ್ಲಿರುವ Yono Pay ಆಪ್ಷನ್ ಟ್ಯಾಪ್ ಮಾಡಿ. ( YONO Lite ಬಳಕೆದಾರರು ಫಂಡ್ ಟ್ರಾನ್ಸ್‌ಫರ್ (Fund Transfer) ಮೇಲೆ ಕ್ಲಿಕ್ ಮಾಡಿ.)
- ಆಡ್/ಮ್ಯಾನೇಜ್ ಬೆನಿಫಿಷಿಯರಿ(Add/Manage Beneficiary) ಟ್ಯಾಪ್ ಮಾಡಿ.
- ಇಲ್ಲಿ ಮುಂದುವರಿಯಲು ಮತ್ತೆ SBI ಇಂಟರ್‌ನೆಟ್ ಬ್ಯಾಂಕಿಂಗ್ ಪ್ರೊಫೈಲ್ ಪಾಸ್‌ವರ್ಡ್ ನಮೂದಿಸಿ, ನಂತರ ಸಬ್ಮಿಟ್ ಮಾಡಿ.
- ಬೆನಿಫಿಷಿಯರಿಯನ್ನು ಸೇರಿಸಲು ಕೆಲವು ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ‘ಸೆಲೆಕ್ಟ್ ಬೆನಿಫಿಷಿಯರಿ ಟೈಪ್’ ಡ್ರಾಪ್ ಡೌನ್ ಬಟನ್ ಮೇಲೆ ಟ್ಯಾಪ್ ಮಾಡಿ.
- ಅಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಅದರ್ ಬ್ಯಾಂಕ್ ಅಕೌಂಟ್ ನಲ್ಲಿ ಆಯ್ಕೆ ಮಾಡಿ.
- ನಂತರ ಬೆನಿಫಿಷಿಯರಿಯ ಹೆಸರು, ಬ್ಯಾಂಕ್ ಖಾತೆಯ ಸಂಖ್ಯೆ, IFSC Code ಇನ್ನಿತರ ವಿವಿರಗಳನ್ನು ನೀಡಿ. ಮತ್ತು ಟ್ರಾನ್ಸಫರ್ ಲಿಮಿಟ್ ಆಪ್ಷನ್ ನಲ್ಲಿ ಹಣ ವರ್ಗಾಯಿಸುವ ಗರಿಷ್ಠ ಮಿತಿಯನ್ನು ನಿಗದಿಪಡಿಸಿಕೊಳ್ಳಿ. ಉದಾಹರಣೆಗೆ: 10,000 ರೂ. ಎಂದು ನಮೂದಿಸಿದ್ದರೆ ಆಗ ಬೆನಿಫಿಷಿಯರಿಗೆ ಒಂದು ಸಲಕ್ಕೆ ಗರಿಷ್ಠ 10,000 ರೂ. ಗಳನ್ನು ಮಾತ್ರ ಪಾವತಿಸಬಹುದು.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸುವ ಮೂಲಕ ದೃಢೀಕರಿಸಬೇಕು.
- 24 ಗಂಟೆಗಳ ಒಳಗೆ ನಿಮ್ಮ SBI YONO / SBI YONO Lite ಅಪ್ಲಿಕೇಷನ್‌ಗೆ ಬೆನಫಿಷಿಯರಿ ಖಾತೆಯು ಲಿಂಕ್ ಆಗಿರುತ್ತದೆ.
ಹೀಗೆ SBI YONO/SBI YONO Lite ಆಪ್‌ಗೆ ಬೆನಿಫಿಷಿಯರಿಗಳನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು. ನಂತರ ನೀವು ಬಯಸಿದಾಗ ಸುಲಭವಾಗಿ ಅವರಿಗೆ ಹಣ ಸಂದಾಯ ಮಾಡಬಹುದು.
ಇದನ್ನೂ ಓದಿ :Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!
(Add Beneficiary in SBI YONO, SBI YONO Lite App for easy transaction)