ನವದೆಹಲಿ : ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘರ್ಷದ ಎಫೆಕ್ಟ್ ಭಾರತಕ್ಕೆ ತಟ್ಟಿದೆ. ತನ್ನ ಪಾಲುದಾರ ದೇಶದ ಜೊತೆಗಿನ ಆಮದು ಮತ್ತು ರಫ್ತು ವ್ಯವಹಾರದ ಮೇಲೆ ಗಂಭೀರ ಹೊಡೆತ ಬಿದ್ದಿದ್ದು, ಭಾರತದಲ್ಲಿ ಒಣ ಹಣ್ಣುಗಳ (Dry Fruits) ಬೆಲೆಯಲ್ಲಿ ಬಾರೀ ಏರಿಕೆ ಕಂಡಿದೆ.
ಭಾರತ ಅಪ್ಘಾನಿಸ್ತಾನ ಸೇರಿದಂತೆ ಅರಬ್ ರಾಷ್ಟ್ರಗಳಿಂದಲೇ ಅತೀ ಹೆಚ್ಚು ಪ್ರಮಾಣದಲ್ಲಿ ಡ್ರೈ ಪ್ರೂಟ್ಸ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಸಂಘರ್ಷದ ಶುರುವಾಗುತ್ತಲೇ ವಾಣಿಜ್ಯ ವಹಿವಾಟಿನ ಮೇಲೆ ಗಂಭೀರ ಪರಿಣಾಮವುಂಟಾಗಿದೆ. ಅದ್ರಲ್ಲೂ ಗೋಡಂಬಿ, ಒಣದ್ರಾಕ್ಷಿ, ಅಂಜೂರ ಮತ್ತು ಬಾದಾಮಿ ಬೆಲೆಯಲ್ಲಿ ಬಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಬಾದಾಮಿಯ ಬೆಲೆ ಪ್ರತಿ ಕೆಜಿಗೆ 100 ರಿಂದ 150 ರೂ.ಗಳಷ್ಟು ಹೆಚ್ಚಾಗಿದೆ ಆದರೆ ದ್ರಾಕ್ಷಿಯ ದರಗಳು ಕೆಜಿಗೆ 100 ರೂ.ಗಿಂತ ಹೆಚ್ಚಾಗಿದೆ.
ಪ್ರಮುಖವಾಗಿ ಅಪ್ಘಾನಿಸ್ತಾನದಿಂದ ಸರಕುಗಳ ಪೂರೈಕೆ ಸ್ಥಗಿತವಾಗಿದೆ. ಜೊತೆಗೆ ಒಣದ್ರಾಕ್ಷಿ, ಅಂಜೂರದ ಹಣ್ಣುಗಳು ಮತ್ತು ಇತರ ಒಣ ಹಣ್ಣುಗಳ ಬೆಳೆಗಳ ಇಳುವರಿಯಲ್ಲಿಯೂ ಕುಂಠಿತವಾಗಿದೆ. ಕಳೆದ ಒಂದು ತಿಂಗಳಿನಿಂದ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಭಾರತಕ್ಕೆ ಸರಕುಗಳ ಪೂರೈಕೆಯಲ್ಲಿ ತೀವ್ರ ಅಡಚಣೆ ಉಂಟಾಗಿದ್ದು, ಬಾದಾಮಿ, ಒಣದ್ರಾಕ್ಷಿ, ಅಂಜೂರದ ಹಣ್ಣುಗಳು ಮತ್ತು ಒಣ ದ್ರಾಕ್ಷಿಗಳ ಕೊರತೆಗೆ ಕಾರಣವಾಗಿದೆ. ಬಾದಾಮಿ ಈ ಹಿಂದೆ ಕೆ.ಜಿ.ಗೆ 600 ರೂ. ಇದ್ದು, ಇದೀಗ 800 ರೂಪಾಯಿಗೆ ಏರಿಕೆಯಾಗಿದೆ. ಒಣ ದ್ರಾಕ್ಷಿ ರೂ 550 ರಿಂದ 750ರೂ., ಅಡಿಕೆ ರೂ 400 ರಿಂದ 600 ಹಾಗೂ ಪಿಸ್ತಾ ಕೆ.ಜಿ.ಗೆ 1750 ರೂ. ಇಂದ 2000 ರೂಪಾಯಿಗೆ ಏರಿಕೆಯಾಗಿದೆ.
ಹೊಸ ದಾಸ್ತಾನು ಬಾರದ ಹಿನ್ನೆಲೆಯಲ್ಲಿ ಪೂರೈಕೆದಾರರು ಹಳೆಯ ದಾಸ್ತಾನುಗಳನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿದ್ದಾರೆ, ಅದ್ರಲ್ಲೂ ಮೊಹರಂ, ರಕ್ಷಾ ಬಂಧನ, ವರ ಮಹಾಲಕ್ಷ್ಮೀ ಹಬ್ಬದಿಂದಾಗಿ ಬೆಲೆ ಯಲ್ಲಿ ಬಾರೀ ಏರಿಕೆಯಾಗಿದೆ. ಜಮ್ಮುಕಾಶ್ಮೀರಕ್ಕೆ ಬರುವ ಪ್ರವಾಸಿಗರು ಅತೀ ಹೆಚ್ಚಿನ ಪ್ರಮಾಣದಲ್ಲಿ ವಾಲ್‌ನಟ್ಸ್ ಖರೀದಿ ಮಾಡುತ್ತಿದ್ದು, ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಅದ್ರಲ್ಲೂ ವಾಲ್‌ನಟ್ ಹಾಗೂ ಬಾದಾಮಿ ಹಿಂದೂ ದೇವತೆ ಮಾತೋ ವೈಷ್ಣೋ ದೇವಿಯ ಪ್ರಸಾದವೆಂದು ಹೇಳಲಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ : ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕೊನೆಗೂ ಪತ್ತೆ : ಮಾನವೀಯತೆಯಿಂದ ಆಶ್ರಯವೆಂದ ಯುಎಇ
ಇದನ್ನೂ ಓದಿ : ಕುವೈತ್‌ನಿಂದ ಭಾರತಕ್ಕೆ ಅ.22 ರಿಂದ ವಿಮಾನ ಸೇವೆ ಪುನರಾರಂಭ