ಸೆಪ್ಟೆಂಬರ್‌ 13 ರಿಂದ ವಿಧಾನಸಭಾ ಅಧಿವೇಶನ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು : ರಾಜ್ಯ ವಿಧಾನಸಭಾ ಅಧಿವೇಶನವನ್ನು ಸಪ್ಟೆಂಬರ್‌ 13ರಿಂದ 24ರ ವರೆಗೆ ನಡೆಯಲಿದೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ವಿಧಾನ ಮಂಡಲ ಅಧಿವೇಶನ ನಡೆಸುವಂತೆ ಕಾಂಗ್ರೆಸ್‌ ಆಗ್ರಹಿಸಿತ್ತು. ಅಲ್ಲದೇ ನೂತನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕೂಡ ಅಧಿವೇಶನ ನಡೆಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೇಮಕವಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಪ್ರತಿಪಕ್ಷಗಳು ಸರಕಾರದ ವೈಫಲ್ಯವನ್ನು ಪ್ರಶ್ನಿಸುವ ಸುಲುವಾಗಿ ಅಧಿವೇಶನ ಕರೆಯಲು ಪಟ್ಟು ಹಿಡಿದಿದ್ದು, ಇದೀಗ ಹತ್ತು ದಿನಗಳ ಕಾಲ ಈ ಬಾರಿ ಅಧಿವೇಶನ ನಡೆಯಲಿದೆ.

ಇದನ್ನೂ ಓದಿ : ಸಚಿವೆಗೆ ಝೀರೋ ಟ್ರಾಫಿಕ್ ಪ್ರಕರಣ: ಸರ್ಕಾರ ಮತ್ತು ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೊಟೀಸ್!

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುತ್ತಾ ಸರಕಾರ : ಇಂದು ಮಹತ್ವದ ಸಚಿವ ಸಂಪುಟ ಸಭೆ

Comments are closed.