ಇಂದು ನಿಮ್ಮ ಏರ್‌ಟೆಲ್ ಸಿಮ್‌ಗೆ ಸರಿಯಾಗಿ ಸಿಗ್ನಲ್ (Airtel Network Isuue) ಬರುತ್ತಿರಲಿಲ್ಲವೇ? ಅರೇ? ಏನಾಯ್ತು..ಈಗಷ್ಟೇ ಗೆಳೆಯರಿಗೆ ಫೊನ್ ಮಾಡಿ ಮಾತನಾಡಿದ್ದೆ, ಈಗಷ್ಟೇ ಯೂಟ್ಯೂಬ್‌ನಲ್ಲಿ ಸಿನಿಮಾ (Airtel Internet) ನೋಡಿದ್ದೆ? ಈಗೇನಾಯ್ತು ಇದಕ್ಕೆ ಎಂದು ಬೈದುಕೊಳ್ಳುತ್ತಿದ್ದೀರಾ? ಬಹಳ ಚಿಂತೆ ಮಾಡಬೇಡಿ. ಈ ಸಮಸ್ಯೆ ಆಗಿರುವುದು ನಿಮಗೊಂದೇ ಅಲ್ಲ.. ಇಂದು ಶುಕ್ರವಾರ (ಫೆಬ್ರುವರಿ 11) ಭಾರತದಾದ್ಯಂತ ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ (Airtel Broadband) ಮತ್ತು ಮೊಬೈಲ್ ಸೇವೆಗಳಲ್ಲಿ ಸ್ಥಗಿತ ಉಂಟಾಗಿಇತ್ತು. ಈಕುರಿತು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಏರ್‌ಟೆಲ್ ಅನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿದ್ದಾರೆ. ತನ್ನ ಗ್ರಾಹಕರ ದೂರುಗಳನ್ನು ಪರಿಶೀಲಿಸಿದ ಏರ್‌ಟೆಲ್ ಕಂಪನಿಯು ತಾನು ಒದಗಿಸುವ ಸೇವೆಯಲ್ಲಿ ಸಂಕ್ಷಿಪ್ತ ಅಡ್ಡಿ (Airtel Down) ಆಗಿರುವುದನ್ನು ಒಪ್ಪಿಕೊಂಡಿದ್ದು, ಸೇವೆಗಳು ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.
“ನಮ್ಮ ಇಂಟರ್ನೆಟ್ ಸೇವೆಗಳು ಅಲ್ಪಾವಧಿಯ ಅಡಚಣೆಯನ್ನು ಅನುಭವಿಸಿದ್ದು ಗ್ರಾಹಕರು ಸೇವೆಯಲ್ಲಿ ವ್ಯತ್ಯಯ ಹೊಂದಿದ್ದಾರೆ. ಇದರಿಂದ ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಮ್ಮ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ನಮ್ಮ ತಂಡ ಕೆಲಸ ಮಾಡುತ್ತಿರುವುದರಿಂದ ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ” ಎಂದು ಏರ್‌ಟೆಲ್ ಇಂಡಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
Our internet services had a brief disruption and we deeply regret the inconvenience this may have caused you. Everything is back as normal now, as our teams keep working to deliver a seamless experience to our customers.
— airtel India (@airtelindia) February 11, 2022
ಏರ್ಟೆಲ್ ಜೊತೆ ಕೈಜೋಡಿಸಲಿದೆ ಗೂಗಲ್
ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸಲು ಸಹಾಯ ಮಾಡುವ ಒಪ್ಪಂದದಲ್ಲಿ ಟೆಕ್ ದೈತ್ಯ ಗೂಗಲ್ ಏರ್‌ಟೆಲ್ ಜೊತೆ ಕೈ ಜೋಡಿಸಿದೆ. ಗೂಗಲ್ ಏರ್‌ಟೆಲ್‌ನಲ್ಲಿ $ 1 ಬಿಲಿಯನ್ ಹೂಡಿಕೆ (Google Airtel Investment) ಮಾಡುವುದಾಗಿ ಘೋಷಿಸಿದೆ. $1 ಶತಕೋಟಿ (ಸುಮಾರು ರೂ. 7,500 ಕೋಟಿಗಳು) ಪೈಕಿ $700 ಮಿಲಿಯನ್ ಏರ್‌ಟೆಲ್‌ನಲ್ಲಿ 1.28 % ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಿಕೊಳ್ಳಲು ಗೂಗಲ್ ತೀರ್ಮಾನಿಸಿದೆ. ಹಾಗೆಯೇ ಉಳಿದ $300 ಮಿಲಿಯನ್ ಐದು ವರ್ಷಗಳ ವಾಣಿಜ್ಯ ಒಪ್ಪಂದಕ್ಕೆ ವಿನಿಯೋಗಿಸಲು ಗೂಗಲ್ ನಿರ್ಧರಿಸಿದೆ. 5ಜಿ , ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳು, ಕ್ಲೌಡ್ ಮೂಲಸೌಕರ್ಯ ಮತ್ತು ಹೆಚ್ಚಿನವುಗಳಂತಹವುಗಳನ್ನು ಈ ಎರಡು ಕಂಪೆನಿಗಳು (Google Airtel Investment) ನೀಡುತ್ತಿವೆ. ಒಪ್ಪಂದವು ಇನ್ನೂ ಅಂತಿಮಗೊಂಡಿಲ್ಲ. ಈ ಒಪ್ಪಂದದ ಕೆಲವು ಪ್ರಮುಖ ಮುಖ್ಯಾಂಶಗಳು ಏನೆಲ್ಲ ಎಂದು ಇಲ್ಲಿ ನೀಡಲಾಗಿದೆ.
$300 ಮಿಲಿಯನ್ ವಾಣಿಜ್ಯ ಒಪ್ಪಂದಗಳಿಗೆ ಖರ್ಚು
ಉಳಿದ $300 ಮಿಲಿಯನ್ (ಸುಮಾರು 2,250 ಕೋಟಿಗಳು) ಮುಂದಿನ ಐದು ವರ್ಷಗಳ ಕಾಲ ಗೂಗಲ್ ಮತ್ತು ಏರ್‌ಟೆಲ್ ಒಟ್ಟಾಗಿ ಕೆಲಸ ಮಾಡುವ ಹೋಗುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು, ಗುಣಮಟ್ಟದ ಗ್ರಾಹಕ ಅನುಭವವನ್ನು ಒದಗಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಪರಿಣತಿಯನ್ನು ತರಲು ಎರಡು ಕಂಪನಿಗಳು ಒಟ್ಟಾಗಿ ಕೆಲಸ ಮಾಡುವುದನ್ನು ಇದು ಒಳಗೊಂಡಿದೆ
ಇದನ್ನೂ ಓದಿ: Airtel Xtreme Premium: ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ ಯೋಜನೆ: ಕೇವಲ 149 ರೂ.ಗೆ ಸಿಗಲಿದೆ 15 ಓಟಿಟಿ ಸೇವೆಗಳು
(Airtel Down disruption in data broadband services network up)