Amazon Prime Day Sale 2022 : ಎರಡು ದಿನಗಳ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇಂದಿನಿಂದ ಆರಂಭ! ಸಖತ್‌ ಡಿಸ್ಕೌಂಟ್‌, ಫ್ರೀ ಡಿಲೇವರಿ ಎಲ್ಲಾ ಮಿಸ್‌ ಮಾಡ್ಕೋಬೇಡಿ!

ಅಮೆಜಾನ್‌ ನ ವಾರ್ಷಿಕ ಪ್ರೈಮ್‌ ಡೇ ಸೇಲ್‌ 2022 (Amazon Prime Day Sale 2022) ಇಂದಿನಿಂದ ಜುಲೈ 23 ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗಿದೆ. ಪ್ರೈಮ್‌ ಸದಸ್ಯರು ಉತ್ತಮ ಡೀಲ್‌ಗಳನ್ನು ಪಡೆಯಬಹುದಾಗಿದೆ. ಸಿದ್ಧ ಉಡುಪುಗಳು, ಪಾದರಕ್ಷೆ, ಮೇಕಪ್, ವಾಚ್‌, ಲಗೇಜ್ ಬ್ಯಾಗ್‌, ಬ್ಯೂಟಿ ಪ್ರಾಡೆಕ್ಟ್ಸ್‌ ಗಳ ಮೇಲೆ 50 ರಿಂದ 80 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.‌

ಅಮೆಜಾನ್ ಇಂಡಿಯಾ (Amazon India) ತನ್ನ ಬಹು ನಿರೀಕ್ಷಿತ ವಾರ್ಷಿಕ ಶಾಪಿಂಗ್ ಈವೆಂಟ್‌ ( Amazon Prime Day Sale 2022) ಅನ್ನು ಪುನಃ ಆಯೋಜಿಸಿದೆ. ಎರಡು ದಿನಗಳ ಈವೆಂಟ್, ಫ್ಯಾಷನ್ ಮತ್ತು ಸೌಂದರ್ಯ ವರ್ಧಕಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಿದೆ. ಅಲೆನ್ ಸೋಲಿ, ವೆರೋ ಮೋಡ, ಪೂಮಾ, ಅಡೀಡಸ್, ಮಾಮಾರ್ತ್, ಮೇಬೆಲಿನ್, ಫಾಸ್ಟ್ರ್ಯಾಕ್, ಫಾಸಿಲ್, ಅಮೇರಿಕನ್ ಟೂರಿಸ್ಟರ್, ಸ್ಕೈಬ್ಯಾಗ್ಸ್, ಝವೇರಿ ಪರ್ಲ್ಸ್, ಮೆಲೋರಾ, ಚುಂಬಕ್ ಸೇರಿದಂತೆ ಹೆಸರಾಂತ ಮತ್ತು ಜನಪ್ರಿಯ ಫ್ಯಾಷನ್ ಮತ್ತು ಸೌಂದರ್ಯ ಬ್ರ್ಯಾಂಡ್‌ಗಳು 70 ಕ್ಕೂ ಹೆಚ್ಚು ಹೊಸ ವಸ್ತುಗಳನ್ನು ಪರಿಚಯಿಸಿದೆ.

ಕ್ಯಾಶುಯಲ್ ಡ್ರೆಸ್‌ಗಳಂತಹ ಕೆಲವು ಸ್ಮಾರ್ಟ್ ಮತ್ತು ಟ್ರೆಂಡಿ ಡ್ರೆಸ್‌ಗಳು, ಎಲ್ಲಾ ಋತುವಿಗೂ ಹೊಂದಿಕೆಯಾಗಬಲ್ಲ ಪಾದರಕ್ಷೆಗಳು, ಸ್ಯಾಂಡಲ್‌ಗಳು, ಗಮ್‌ಬೂಟ್‌ಗಳು, ವಾಟರ್ ರೆಸಿಸ್ಟೆಂಟ್ ಹ್ಯಾಂಡ್‌ಬ್ಯಾಗ್‌ಗಳು ಮತ್ತು ವಾಚ್‌ಗಳು ಮೇಲೆ ಗ್ರಾಹಕರು ಅತ್ಯಾಕರ್ಷಕ ಡೀಲ್‌ಗಳನ್ನು ಕಾಣಬಹುದಾಗಿದೆ.

ಪ್ರೈಮ್ ಡೇ ಸೇಲ್‌ ಅನ್ನು ಭಾರತ ಸೇರಿದಂತೆ 25 ದೇಶಗಳಲ್ಲಿ 200 ಮಿಲಿಯನ್‌ಗಿಂತಲೂ ಹೆಚ್ಚು ಪ್ರೈಮ್ ಸದಸ್ಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಹೆಚ್ಚುವರಿಯಾಗಿ, 18-24 ವರ್ಷ ವಯಸ್ಸಿನ ಗ್ರಾಹಕರು ಯೂತ್ ಆಫರ್ ಅನ್ನು ಪಡೆಯಬಹುದಾಗಿದೆ. ಪ್ರೈಮ್‌ಗೆ ಸೈನ್ ಅಪ್ ಮಾಡಿದ ನಂತರ Amazon ನಲ್ಲಿ ತಮ್ಮ ವಯಸ್ಸನ್ನು ಸರಳವಾಗಿ ಪರಿಶೀಲಿಸುವ ಮೂಲಕ ತಮ್ಮ ಪ್ರೈಮ್ ಸದಸ್ಯತ್ವದಲ್ಲಿ 50 ಪ್ರತಿಶತದಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಭಾರತದಲ್ಲಿ ಅನಿಯಮಿತ ಉಚಿತ ಶಿಪ್ಪಿಂಗ್, ಪ್ರೈಮ್ ವೀಡಿಯೊದೊಂದಿಗೆ ಪ್ರಶಸ್ತಿ ವಿಜೇತ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಅನಿಯಮಿತ ಎಕ್ಸಸ್‌, 90 ಮಿಲಿಯನ್‌ಗಿಂತಲೂ ಹೆಚ್ಚು ಹಾಡುಗಳ ಅನಿಯಮಿತ ಎಕ್ಸಸ್‌, ಪ್ರೈಮ್ ಮ್ಯೂಸಿಕ್‌ನೊಂದಿಗೆ ಜಾಹೀರಾತು-ಮುಕ್ತ ಮತ್ತು ಮಿಲಿಯನ್‌ಗಟ್ಟಲೆ ಪಾಡ್‌ಕ್ಯಾಸ್ಟ್ ಸಂಚಿಕೆಗಳು, 3,000 ಕ್ಕೂ ಹೆಚ್ಚು ಪ್ರೈಮ್ ರೀಡಿಂಗ್‌ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಕಾಮಿಕ್ಸ್ ಗಳಿಗೆ ಉತ್ತಮ ಡೀಲ್‌ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : New Maruti Suzuki Alto Launch : ಹೊಸ ಆಲ್ಟೋ ಗಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ! ಆಗಸ್ಟ್‌ 18ಕ್ಕೆ ಬಿಡುಗಡೆ ಸಾಧ್ಯತೆ

ಇದನ್ನೂ ಓದಿ : Senior Citizen FDs : ಈ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 7% ಗಿಂತಲೂ ಅಧಿಕ ಬಡ್ಡಿ ನೀಡುತ್ತವೆ!

(amazon prime day sale 2022 started on July 23)

Comments are closed.