ಎಟಿಎಂ ಸೇವೆಯ ಪ್ರಯೋಜನವನ್ನು ಪಡೆಯಲು ಶುಲ್ಕ ಪಾವತಿ ಮಾಡುತ್ತಿದ್ದ ಬ್ಯಾಂಕ್ ಗ್ರಾಹಕರು ಮುಂದಿನ ವರ್ಷದ ಆರಂಭದಲ್ಲೇ ಅಂದರೆ ಜನವರಿ ಬಳಿಕ ಉಚಿತ ಎಟಿಎಂ ವ್ಯವಹಾರ ಮಿತಿಯನ್ನು ಮೀರಿದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜೂನ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ (RBI) ನಗದು ರಹಿತ ಎಟಿಎಂ ವ್ಯವಹಾರಗಳ ಶುಲ್ಕವನ್ನು (ATM Charges) ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿತ್ತು. ಅದೇ ರೀತಿ ಈ ಪರಿಷ್ಕೃತ ಎಟಿಎಂ ಸೇವೆಯ ಶುಲ್ಕವು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ.
ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ, ಉಚಿತ ಎಟಿಎಂ ಸೇವೆಯನ್ನು ನೀಡುವ ಮಿತಿಯನ್ನು ಮೀರಿ ನಡೆಸಲಾಗುವ ಎಟಿಎಂ ವ್ಯವಹಾರಗಳಿಗೆ ಆಕ್ಸಿಕ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳು 21 ರೂಪಾಯಿಗೂ ಅಧಿಕ ಜಿಎಸ್ಟಿ ವಿಧಿಸಲಿದೆ. ಇದು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ ಎಂದು ಆ್ಯಕ್ಸಿಕ್ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ. ಜನವರಿ 1 ರಿಂದ ಅನ್ವಯವಾಗುವಂತೆ ಬ್ಯಾಂಕ್ ಗ್ರಾಹಕರು ಉಚಿತ ಮಾಸಿಕ ಮಿತಿಯನ್ನು ಮೀರಿದ ಪ್ರತಿ ವ್ಯವಹಾರಗಳಿಗೆ ಈ ಹಿಂದೆ ನೀಡುತ್ತಿದ್ದ 20 ರೂಪಾಯಿಗಳ ಬದಲಾಗಿ 21 ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕು. ಈ ಹೆಚ್ಚುವರಿ ಮೊತ್ತವು ಜನವರಿಗೆ 1ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂದಹಾಗೆ ಮುಂದಿನ ವರ್ಷ ಕೂಡ ಗ್ರಾಹಕರಿಗೆ ತಮ್ಮದೇ ಬ್ಯಾಂಕ್ನ ಎಟಿಎಂಗಳಲ್ಲಿ ಐದು ಉಚಿತ ಟ್ರಾನ್ಸಾಕ್ಷನ್ ಮಿತಿಯನ್ನು ಮುಂದುವರಿಸಲಾಗಿದೆ. ಇದರ ಜೊತೆಯಲ್ಲಿ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲೂ ಸೀಮಿತ ಅವಧಿಗೆ ಉಚಿತ ವ್ಯವಹಾರ ನಡೆಸಬಹುದಾಗಿದೆ. ಇದು ಮೆಟ್ರೋ ನಗರಗಳಲ್ಲಿ ಮೂರು ಹಾಗೂ ನಾನ್ ಮೆಟ್ರೋ ನಗರಗಳಲ್ಲಿ ಐದು ವ್ಯವಹಾರಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಇದರ ಜೊತೆಯಲ್ಲಿ ಆರ್ಬಿಐ ಪ್ರತಿ ವ್ಯವಹಾರಕ್ಕೆ ಇಂಟರ್ಚೇಂಜ್ ಶುಲ್ಕವನ್ನು ಹಣಕಾಸು ವಹಿವಾಟುಗಳಿಗೆ 15 ರೂಪಾಯಿಯಿಂದ 17 ರೂಪಾಯಿಗಳವರೆಗೆ ಹಾಗೂ ಹಣಕಾಸೇತರ ವಹಿವಾಟುಗಳಿಗೆ 5 ರೂಪಾಯಿಗಳಿಂದ 6 ರೂಪಾಯಿಗಳವರೆಗೆ ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಇದು ಆಗಸ್ಟ್ 1ರಿಂದಲೇ ಜಾರಿಗೆ ಬಂದಿದೆ.
ಇದನ್ನು ಓದಿ:blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು
( ATM Charges Cash Withdrawals to Cost More From THIS Date. Check New Charges, Other Details Here )