Gautam Adani :ಬಿಜೆಪಿಗೆ ಮತ್ತೊಂದು ಶಾಕ್​ ನೀಡಿತಾ ಟಿಎಂಸಿ..? ಕುತೂಹಲ ಮೂಡಿಸಿದ ಗೌತಮ್ ಅದಾನಿ-ಮಮತಾ ಬ್ಯಾನರ್ಜಿ ಭೇಟಿ..!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬಗ್ಗು ಬಡಿದು ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿದ ತೃಣಮೂಲ ಕಾಂಗ್ರೆಸ್​​ ಚುನಾವಣೆ ಬಳಿಕವೂ ಬಿಜೆಪಿಗೆ ಶಾಕ್​ ಮೇಲೆ ಶಾಕ್​ ನೀಡುತ್ತಲೇ ಬರ್ತಿದೆ. ಈಗಾಗಲೇ ಬಿಜೆಪಿಯ ಸಾಕಷ್ಟು ಶಾಸಕರು ಟಿಎಂಸಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೇ ಗೋವಾ ಸೇರಿದಂತೆ ವಿವಿಧೆಡೆ ತೃಣಮೂಲ ಕಾಂಗ್ರೆಸ್​ ಗಟ್ಟಿಯಾಗಿ ಬೇರೂರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಅದಾನಿ ಗ್ರೂಪ್​​ ಸಂಸ್ಥಾಪಕ ಹಾಗೂ ಚೇರ್​ಮನ್​ ಗೌತಮ್​ ಅದಾನಿ (Gautam Adani) ಭೇಟಿಯು ಬಾರೀ ಕುತೂಹಲ ಮೂಡಿಸಿದೆ.

ಗೌತಮ್​ ಅದಾನಿ ಹಾಗೂ ಪ್ರಧಾನಿ ಭಾಯಿ ಭಾಯಿ ಎಂದೇ ರಾಜಕೀಯ ವಲಯದಲ್ಲಿ ಮಾತನಾಡಲಾಗುತ್ತೆ. ಅಂತದ್ರಲ್ಲಿ ಬಿಜೆಪಿಯ ಕಡುವೈರಿ ಟಿಎಂಸಿ ನಾಯಕಿಯ ಜೊತೆ ಗೌತಮ್​ ಅದಾನಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸಿದೆ. ಗುರುವಾರದಂದು ರಾಜ್ಯ ಸಚಿವಾಲಯದ ನಬನ್ನಾದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಗೌತಮ್​ ಅದಾನಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ವೇಳೆ ತೃಣಮೂಲ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಕೂಡ ಹಾಜರಿದ್ದರು ಎನ್ನಲಾಗಿದೆ.

ಮುಂಬೈನಿಂದ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಅದಾನಿ ಭೇಟಿಗಾಗಿ ನಬನ್ನಾಗೆ ತೆರಳಿದ್ದರು ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಭೇಟಿ ಬಳಿಕ ಟ್ವೀಟಾಯಿಸಿದ ಗೌತಮ್​ ಅದಾನಿ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ಉದ್ಯಮ ಹೂಡಿಕೆ ಮಾಡುವುದರ ಬಗ್ಗೆ ಹಾಗೂ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. 2022ರ ಏಪ್ರಿಲ್​ನಲ್ಲಿ ಬಂಗಾಳ ಉದ್ಯಮ ಶೃಂಗಸಭೆ ಯಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : Piyush Goyal: ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ 30ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

Gautam Adani meets Mamata Banerjee, discusses investment scenario in West Bengal

Comments are closed.