ನವದೆಹಲಿ : ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ (NBFC) ಪ್ರಮುಖ ಬಜಾಜ್ ಫೈನಾನ್ಸ್ (Bajaj Finance Hikes FD Rates) ಅವಧಿಯಾದ್ಯಂತ ಎಫ್‌ಡಿ (Fixed Deposit) ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. 15,000 ರಿಂದ 5 ಕೋಟಿ ರೂ. ವರೆಗೆ ಪರಿಷ್ಕೃತ ಬಡ್ಡಿದರಗಳು 4 ಮಾರ್ಚ್ 2023 ರಿಂದ ಜಾರಿಗೆ ಬರುವಂತೆ ಮಾಡಿದೆ. ಹೀಗಾಗಿ ಹಿರಿಯ ನಾಗರಿಕರು ಎಫ್‌ಡಿಯಲ್ಲಿ ಹೂಡಿಕೆಯನ್ನು ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದೀಗ ಬಜಾಜ್ ಫೈನಾನ್ಸ್‌ನಲ್ಲಿ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇ.8.20 ರವರೆಗೆ ಬಡ್ಡಿಯನ್ನು ಗಳಿಸಬಹುದು.
ಹಿರಿಯ ನಾಗರಿಕರು 44 ತಿಂಗಳ ಅವಧಿಗೆ 15,000 ಮತ್ತು 5 ಕೋಟಿ ರೂಪಾಯಿಗಳ ನಡುವಿನ ಎಫ್‌ಡಿ ಯೋಜನೆಗೆ ಶೇಕಡಾ 8.20ರಷ್ಟು ಬಡ್ಡಿದರವನ್ನು ಗಳಿಸಬಹುದು. 33 ತಿಂಗಳ ಅವಧಿಗೆ, ಹಿರಿಯ ನಾಗರಿಕರು ಶೇಕಡಾ 8 ರಷ್ಟು ಬಡ್ಡಿದರವನ್ನು ಗಳಿಸಬಹುದು. ಇನ್ನು 36 ದಿನಗಳಿಂದ 43 ತಿಂಗಳುಗಳು ಮತ್ತು 45 ದಿನದಿಂದ 60 ತಿಂಗಳ ಅವಧಿಗೆ, ಹಿರಿಯ ನಾಗರಿಕರು ಶೇಕಡಾ 7.90 ರಷ್ಟು ಬಡ್ಡಿದರವನ್ನು ಗಳಿಸಬಹುದು. ಸಾಮಾನ್ಯ ನಾಗರಿಕರು 44 ತಿಂಗಳ ಅವಧಿಗೆ ರೂ 15,000 ಮತ್ತು ರೂ 5 ಕೋಟಿ ನಡುವಿನ ಸ್ಥಿರ ಠೇವಣಿ ಯೋಜನೆಯಲ್ಲಿ ಗರಿಷ್ಠ ಶೇ. 7.95ರಷ್ಟು ಬಡ್ಡಿಯನ್ನು ಗಳಿಸಬಹುದು. ಸಾಮಾನ್ಯ ಹೂಡಿಕೆದಾರರು 33 ತಿಂಗಳ ಅವಧಿಗೆ ಶೇಕಡಾ 7.75 ರ ಬಡ್ಡಿದರವನ್ನು ಗಳಿಸಬಹುದು. ಅವರು 45 ದಿನಗಳಿಂದ 60 ತಿಂಗಳ ಅವಧಿಗೆ ಶೇ. 7.65ರಷ್ಟು ಬಡ್ಡಿದರವನ್ನು ಗಳಿಸಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಸ್ವೀಕರಿಸದಿದ್ದರೆ ಆನ್‌ಲೈನ್‌ನಲ್ಲಿ ಹೀಗೆ ದೂರು ಸಲ್ಲಿಸಿ
ಇದನ್ನೂ ಓದಿ : ನೀವು ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರೇ ಈ ಸುದ್ದಿ ನಿಮಗಾಗಿ
ಇದನ್ನೂ ಓದಿ : ಇಂದು ಕೇಂದ್ರ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಸರಕಾರದ ಘೋಷಣೆ ? ಕಂಪ್ಲೀಟ್ ಡಿಟೇಲ್ಸ್ ನಿಮಗಾಗಿ
ಶೇ. 7.50ರಷ್ಟು ಬಡ್ಡಿದರವನ್ನು ಗಳಿಸಲು, ಬಹು ಅವಧಿಗಳವರೆಗೆ ಅಂದರೆ 15 ದಿನಗಳಿಂದ 17 ತಿಂಗಳುಗಳಿಗಿಂತ ಹೆಚ್ಚು, ಆದರೆ 18 ತಿಂಗಳಿಗಿಂತ ಕಡಿಮೆ ಆಗಿರುತ್ತದೆ. ಇನ್ನು 19 ದಿನಗಳಿಂದ 21 ತಿಂಗಳುಗಳು, 22 ತಿಂಗಳುಗಳು ಅಥವಾ 23 ತಿಂಗಳುಗಳು ಎಫ್‌ಡಿಗಳಲ್ಲಿ ಆದಾಯವನ್ನು ಹೂಡಿಕೆ ಮಾಡಬಹುದಾಗಿದೆ.
Bajaj Finance Hikes FD Rates : Attention Senior Citizens : FD interest rate is Bajaj Finance raised to Rs.8.20