ಅರ್ಥಪೂರ್ಣ ಹೋಳಿ ಆಚರಿಸಿದ ಹಿರಿಯ ನಟಿ ಶ್ರುತಿ : ಕ್ಯೂಟ್ ವಿಡಿಯೋ ವೈರಲ್

ಸಾಮಾನ್ಯವಾಗಿ ನಟ, ನಟಿಯರು ಸೆಲೆಬ್ರೇಟಿಗಳು ತಮ್ಮ ಹುಟ್ಟುಹಬ್ಬದಿಂದ ಆರಂಭಿಸಿ ಹಬ್ಬಗಳವರೆಗೆ ಎಲ್ಲವನ್ನೂ ಸೆಲೆಬ್ರೇಶನ್ ರೀತಿಯಲ್ಲೇ ಆಚರಿಸಿ ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ಶೇರ್ ಮಾಡುವುದರಲ್ಲಿ ಸದಾ ಉತ್ಸುಕರಾಗಿರ್ತಾರೆ. ಆದರೇ ಕನ್ನಡದ ಹಿರಿಯ ನಟಿ ಹಾಗೂ ಮನೆ ಮಗಳು ಶ್ರುತಿ (Actress Shruti )ಮಾತ್ರ ಒಂದೊಳ್ಳೆ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಹೋಳಿಹಬ್ಬದ ಸಂಭ್ರಮ ರಂಗೇರಿದೆ. ಜನರು , ನಟ-ನಟಿಯರು ತಮ್ಮ ಆಪ್ತರಿಗೆ ಆತ್ಮೀಯರಿಗೆ ಬಣ್ಣ ಬಳಿದು ಸಂಭ್ರಮಿಸುತ್ತಿದ್ದಾರೆ.

ಆದರೆ‌ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಹಾಗೂ ಮನೆ ಮಗಳು ಶ್ರುತಿ ಹಾಗೂ ಅವರ ಪುತ್ರಿ ಗೌರಿಕೃಷ್ಣ ಮಾತ್ರ ಸೈಲೆಂಟಾಗಿ ಒಂದೊಳ್ಳೆ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಹೌದು ನಟಿ ಶ್ರುತಿ ತಮ್ಮ ಪುತ್ರಿ ಜೊತೆ ವೃದ್ಧಾಪ್ಯದ ಅಂಚಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ ಹಿರಿಯ ನಟಿ ಲೀಲಾವತಿಯವರ ಜೊತೆ ಸಮಯ ಕಳೆದು ಅವರಿಗೆ ಬಣ್ಣ ಹಚ್ಚಿ, ಊಟ ಮಾಡಿಸಿ ಅವರ ಸೇವೆ ಮಾಡಿ ಅರ್ಥಪೂರ್ಣ ಹೋಳಿ ಆಚರಣೆ ಮಾಡಿದ್ದಾರೆ.

ನಟಿ ಲೀಲಾವತಿಯವರು ನೆಲಮಂಗಲದ ಬಳಿ ಪುತ್ರ ವಿನೋದ್ ರಾಜ್ ಜೊತೆ ವಾಸವಾಗಿದ್ದು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆಗಾಗ ಕೊಂಚ ಚೇತರಿಸಿಕೊಳ್ಳುವ ಲೀಲಾವತಿಯವರು ಬಹುತೇಕ ಸಮಯ ಮಲಗಿಕೊಂಡೇ ಇರುತ್ತಾರೆ‌. ಪುತ್ರ ವಿನೋದ್ ರಾಜ್ ಅವರ ಸೇವೆ ಮಾಡುತ್ತಾರೆ. ಹೀಗಿರುವಾಗ ನಟಿ ಶ್ರುತಿ ಹಾಗೂ ಅವರ ಪುತ್ರಿ ಗೌರಿ ಹಬ್ಬದ ದಿನ ಲೀಲಾವತಿಯವರ ಜೊತೆ ಕಳೆಯೋ ಮೂಲಕ ಹಿರಿಯ ಜೀವಕ್ಕೆ ನೆರವಾಗಿದ್ದು ಮಾತ್ರವಲ್ಲದೇ ಅವರ ಮನಸ್ಸಿಗೆ ಖುಷಿ ತರೋ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ಇನ್ನಿಲ್ಲ : ಸಂತಾಪ ಸೂಚಿಸಿದ ಬಾಲಿವುಡ್‌ ಸಿನಿತಾರೆಯರು

ಇದನ್ನೂ ಓದಿ : ಅಳವಿನಂಚಿನಲ್ಲಿರುವ ಕಾಡಿನ ಉಳಿವಿಗಾಗಿ ಮನವಿ ಸಲ್ಲಿಸಿದ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : “ಘಜನಿ” ಸಿನಿಮಾ ನಿರ್ಮಾಪಕ ಮಧು ಮಾಂಟೇನಾ ತಂದೆ ನಿಧನ : ಸಂತಾಪ ಸಲ್ಲಿಸಿದ ಸಿನಿತಾರೆಯರು

ಹಾಗೇ ನೋಡಿದ್ರೇ ನಟಿ ಶ್ರುತಿ ಲೀಲಾವತಿಯವರ ಭೇಟಿ ಹಾಗೂ ಆರೈಕೆಗೆ ಹೋಗ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ನಟಿಯರಾದ ಶ್ರುತಿ, ಮಾಳವಿಕಾ, ಸುಧಾರಾಣಿ ಸೇರಿದಂತೆ ಹಲವರು ಲೀಲಾವತಿಯವರ ಮನೆಗೆ ಹೋಗಿ ಅಲ್ಲಿಯೇ ಅಡುಗೆ ಮಾಡಿ ಲೀಲಾವತಿಯವರಿಗೆ ಊಟ ಮಾಡಿಸಿ ಕಾಲ ಕಳೆದು ಬಂದಿದ್ದಾರೆ. ಸಹ ನಟಿಯರನ್ನೇ ನೆನಪಿಟ್ಟುಕೊಳ್ಳದ ಈ ಕಾಲದಲ್ಲಿ ನಟಿ ಶ್ರುತಿ ಹೃದಯ ವೈಶಾಲ್ಯತೆಯಿಂದ ಹಿರಿಯ ನಟಿಯನ್ನು ನೋಡಿಕೊಂಡಿದ್ದು, ಲೀಲಾವತಿಯವರ ಮಾಗಿದ ಮುಖಕ್ಕೆ ಬಣ್ಣ ಹಚ್ಚಿ ಅವರ ಮುಖದಲ್ಲೂ ನಗು ಅರಳಿಸುವ ಪ್ರಯತ್ನ ಮಾಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶ್ರುತಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Actress Shruti: Veteran actress Shruti celebrated a meaningful Holi: Cute video viral

Comments are closed.