Bakrid 2023 : ಬಕ್ರೀದ್ 2023: ಜೂನ್ 29ರಂದು ಈ ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜೆ

ನವದೆಹಲಿ: (Bakrid 2023) ಬಕ್ರೀದ್ ಅಥವಾ ಈದ್ ಅಲ್-ಅಧಾ ಹಿನ್ನೆಲೆಯಲ್ಲಿ ಜೂನ್ 29ರಂದು ದೇಶದ ಹಲವು ನಗರಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಅಲ್ಲದೇ ಕೊಚ್ಚಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ದೇಶದ ಯಾವ ನಗರಗಳಲ್ಲಿ ಬ್ಯಾಂಕುಗಳು ಬಂದ್‌ ಆಗಲಿರಲಿವೆ, ಅಲ್ಲದೇ ಎಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಅನ್ನೋ ಮಾಹಿತಿ ಇಲ್ಲಿದೆ.

ಮುಸ್ಲೀಂ ಸಮುದಾಯದವರ ವಾರ್ಷಿಕ ಹಬ್ಬವಾದ ಬಕ್ರಿ-ಈದ್ ಅನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ವೇಳೆಯಲ್ಲಿ ಮುಸ್ಲೀಂ ಬಾಂಧವರು ತಮ್ಮ ಸಂಬಂಧಿಕರಿಗೆ ಮಾಂಸವನ್ನು ವಿತರಿಸಿ ಊಟ ಮಾಡುತ್ತಾರೆ. ಅಲ್ಲದೇ ತಕ್ಭೀರ್‌ ಪಠಣ ಮಾಡುವುದು ಈ ದಿನ ಪ್ರಮುಖ ಆಚರಣೆಯಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ಬ್ಯಾಂಕುಗಳು ಮುಚ್ಚಿದ್ದರೂ ಕೂಡ ಗ್ರಾಹಕರು ಎಂದಿನಂತೆಯೇ ಡಿಜಿಟಲ್‌ ವ್ಯವಹಾರವನ್ನು ಮುಂದುವರಿಸಬಹುದಾಗಿದೆ.

ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್ – ಆಂಧ್ರಪ್ರದೇಶ, ಹೈದರಾಬಾದ್ – ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ ಮುಂತಾದ ನಗರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. , ಲಕ್ನೋ, ನವದೆಹಲಿ, ಪಾಟ್ನಾ, ಪಣಜಿ, ಶಿಲ್ಲಾಂಗ್, ರಾಂಚಿ, ಶಿಮ್ಲಾ ಮತ್ತು ಶ್ರೀನಗರದಲ್ಲಿ ಜೂನ್ 29 ರಂದು ಬ್ಯಾಂಕುಗಳು ಕ್ಲೋಸ್‌ ಆಗಿ ಇರುತ್ತದೆ.

ಇದನ್ನೂ ಓದಿ : Mukhyamantri Udyami Yojana : ಮುಖ್ಯಮಂತ್ರಿ ಉದ್ಯಮಿ ಯೋಜನೆ : ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಯೋಜನೆಯಡಿ 10 ಲಕ್ಷ ರೂ. ಲಭ್ಯ

ಇದನ್ನೂ ಓದಿ : 7th Pay Commission News ‌: ಜುಲೈನಿಂದ ಕೇಂದ್ರ ಸರಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆ

ಇನ್ನು ಬೇಲಾಪುರ್, ಭುವನೇಶ್ವರ್, ಗ್ಯಾಂಗ್ಟಾಕ್, ಕೊಚ್ಚಿ, ಮುಂಬೈ, ನಾಗ್ಪುರ ಮತ್ತು ತಿರುವನಂತಪುರಂನಲ್ಲಿನ ಬ್ಯಾಂಕ್‌ಗಳು ಬಕ್ರೀದ್‌ ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನದಂತಹ ಮೂರು ವಿಭಾಗಗಳ ಅಡಿಯಲ್ಲಿ ಬ್ಯಾಂಕ್ ರಜಾದಿನಗಳನ್ನು RBIನಿರ್ಧಾರ ಮಾಡಲಿದೆ.

Bakrid 2023: Bank holiday in these cities on June 29

Comments are closed.