ಮಂಗಳವಾರ, ಏಪ್ರಿಲ್ 29, 2025
HomebusinessBakrid Bank Holiday 2023: ಬಕ್ರೀದ್‌ ಹಿನ್ನೆಲೆ ಈ ರಾಜ್ಯಗಳಲ್ಲಿ ಜೂನ್ 28, 29 ರಂದು...

Bakrid Bank Holiday 2023: ಬಕ್ರೀದ್‌ ಹಿನ್ನೆಲೆ ಈ ರಾಜ್ಯಗಳಲ್ಲಿ ಜೂನ್ 28, 29 ರಂದು ಬ್ಯಾಂಕ್‌ಗಳಿಗೆ ರಜೆ

- Advertisement -

ನವದೆಹಲಿ : Bakrid Bank Holiday 2023 : ಬಕ್ರೀದ್‌ ಹಬ್ಬವನ್ನು ಮುಸ್ಲೀಂ ಬಾಂಧವರು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜೂನ್‌ 29 ರಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಜೂನ್‌ 28 ರಂದು ಬಕ್ರೀದ್‌ ಅಥವಾ ಈದ್‌ -ಅಲ್-ಅಧಾ ಆಚರಿಸಲಾಗುತ್ತಿದ್ದು, ದೇಶದ ಕೆಲವೊಂದು ರಾಜ್ಯಗಳಲ್ಲಿ ಬ್ಯಾಂಕುಗಳು ಜೂನ್‌ 29 ರಂದು ರಜೆ ಘೋಷಿಸಿದ್ರೆ, ಇನ್ನು ಕೆಲವು ಬ್ಯಾಂಕುಗಳು ಜೂನ್‌ 29 ರಂದು ರಜೆ ಘೋಷಣೆ ಮಾಡಿವೆ. ಹಾಗಾದ್ರೆ ಯಾವ ರಾಜ್ಯದ ಯಾವ ದಿನ ಬ್ಯಾಂಕ್‌ ರಜೆ ಅನ್ನೋ ಮಾಹಿತಿ ಇಲ್ಲಿದೆ.

ಕೇರಳ, ಮಹಾರಾಷ್ಟ್ರ ಮತ್ತು ಜಮ್ಮು ಮತ್ತು ಕಾಶ್ಮೀ, ಬೇಲಾಪುರ್, ಜಮ್ಮು, ಕೊಚ್ಚಿ, ಮುಂಬೈ, ನಾಗ್ಪುರ, ಶ್ರೀನಗರ, ತಿರುವನಂತಪುರಂದಲ್ಲಿ ಜೂನ್‌ 28 ರಂದು ಬ್ಯಾಂಕುಗಳು ಬಂದ್‌ ಆಗಿರಲಿವೆ. ಆದರೆ ಜೂನ್ 29 ರಂದು ನವದೆಹಲಿ, ಶ್ರೀನಗರ, ಚಂಡೀಗಢ, ಇಂಫಾಲ್, ಜೈಪುರ, ಅಹಮದಾಬಾದ್, ಅಗರ್ತಲಾ, ಬೆಂಗಳೂರು, ಐಜ್ವಾಲ್, ಪಣಜಿ, ಪಾಟ್ನಾ, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ರಾಂಚಿ , ಜಮ್ಮು, ಕೋಲ್ಕತ್ತಾ, ಲಕ್ನೋ, ಶಿಲ್ಲಾಂಗ್, ಶಿಮ್ಲಾ, ಭೋಪಾಲ್, ಗುವಾಹಟಿ, ಕಾನ್ಪುರದಲ್ಲಿ ಬ್ಯಾಂಕುಗಳು ರಜೆ ಘೋಷಣೆ ಮಾಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೂರು ವಿಭಾಗಗಳ ಅಡಿಯಲ್ಲಿ ರಜಾದಿನಗಳನ್ನು ಇರಿಸುತ್ತದೆ- ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳನ್ನು ನಿಗದಿ ಮಾಡುತ್ತದೆ. ಇನ್ನು ಜುಲೈ 2023 ರಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಜುಲೈನಲ್ಲಿ 15 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಮೊಹರಂ, ಗುರು ಹರಗೋಬಿಂದ್ ಜಿ ಅವರ ಜನ್ಮದಿನ, ಅಶೂರ ಮತ್ತು ಕೇರ್ ಪೂಜೆಗಾಗಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.

ಜುಲೈ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:

ಜುಲೈ 2: ಭಾನುವಾರ
ಜುಲೈ 5: ಗುರು ಹರಗೋಬಿಂದ್ ಜಿ ಅವರ ಜನ್ಮದಿನ (ಜಮ್ಮು ಮತ್ತು ಶ್ರೀನಗರ)
ಜುಲೈ 6: Mizo Hmeichhe Insuihkhawm Pawl (MHIP) ದಿನ (ಮಿಜೋರಾಂ)
ಜುಲೈ 8: ಎರಡನೇ ಶನಿವಾರ
ಜುಲೈ 9: ಭಾನುವಾರ
ಜುಲೈ 11: ಕೇರ್ ಪೂಜೆ (ತ್ರಿಪುರ)
ಜುಲೈ 13: ಭಾನು ಜಯಂತಿ (ಸಿಕ್ಕಿಂ)
ಜುಲೈ 16: ಭಾನುವಾರ
ಜುಲೈ 17: ಯು ಟಿರೋಟ್ ಸಿಂಗ್ ಡೇ (ಮೇಘಾಲಯ)
ಜುಲೈ 21: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)
ಜುಲೈ 22: ನಾಲ್ಕನೇ ಶನಿವಾರ
ಜುಲೈ 23: ಭಾನುವಾರ
ಜುಲೈ 28: ಅಶೂರ (ಜಮ್ಮು ಮತ್ತು ಶ್ರೀನಗರ)
ಜುಲೈ 29: ಮೊಹರಂ (ತ್ರಿಪುರಾ, ಮಿಜೋರಾಂ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ನವದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)

ಇದನ್ನೂ ಓದಿ : Bank Holiday July 2023 : ಗ್ರಾಹಕರ ಗಮನಕ್ಕೆ : ಜುಲೈ ತಿಂಗಳಲ್ಲಿ ಒಟ್ಟು 15 ದಿನ ಬ್ಯಾಂಕ್ ರಜೆ

ಇದನ್ನೂ ಓದಿ : Bakrid 2023 : ಬಕ್ರೀದ್‌ ಹಿನ್ನೆಲೆ ಅನಧಿಕೃತ ಪ್ರಾಣಿಗಳ ವಧೆ ಮೇಲೆ ಕಣ್ಗಾವಲು : ಉಡುಪಿ ಡಿಸಿ ಸೂಚನೆ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular