ICC World Cup 2023 Schedule : ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಅಕ್ಟೋಬರ್ 15ಕ್ಕೆ ಅಹ್ಮದಾಬಾದ್’ನಲ್ಲಿ ಭಾರತ Vs ಪಾಕ್ ಪಂದ್ಯ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ( ICC World Cup 2023 Schedule ) ಟೂರ್ನಿಯ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ್ದು, ಆಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India Vs Pakistan) ತಂಡಗಳು ಮುಖಾಮುಖಿಯಾಗಲಿವೆ.

ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.
ಅಕ್ಟೋಬರ್ 5ರಂದು ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ತಲಾ 9 ಪಂದ್ಯಗಳನ್ನಾಡಲಿದ್ದು, ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ನವೆಂಬರ್ 19ರಂದು ನಡೆಯುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule)

ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
ಅಕ್ಟೋಬರ್ 6: ಪಾಕಿಸ್ತಾನ Vs ಕ್ವಾಲಿಫೈಯರ್-1 (ಹೈದರಾಬಾದ್)
ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-2 (ದೆಹಲಿ)
ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
ಅಕ್ಟೋಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-1 (ಹೈದರಾಬಾದ್)
ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ 12: ಪಾಕಿಸ್ತಾನ Vs ಕ್ವಾಲಿಫೈಯರ್-2 (ಹೈದರಾಬಾದ್)
ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
ಅಕ್ಟೋಬರ್ 16: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-2 (ಲಕ್ನೋ)
ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-1(ಧರ್ಮಶಾಲಾ)
ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
ಅಕ್ಟೋಬರ್ 21: ಕ್ವಾಲಿಫೈಯರ್-1 Vs ಕ್ವಾಲಿಫೈಯರ್-2 (ಲಕ್ನೋ)
ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
ಅಕ್ಟೋಬರ್ 25: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-1 (ದೆಹಲಿ)
ಅಕ್ಟೋಬರ್ 26: ಇಂಗ್ಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
ಅಕ್ಟೋಬರ್ 28: ಕ್ವಾಲಿಫೈಯರ್-2 Vs ಬಾಂಗ್ಲಾದೇಶ (ಕೋಲ್ಕತಾ)
ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
ಅಕ್ಟೋಬರ್ 30: ಅಫ್ಘಾನಿಸ್ತಾನ Vs ಕ್ವಾಲಿಫೈಯರ್-2 (ಪುಣೆ)
ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
ನವೆಂಬರ್ 2: ಭಾರತ Vs ಕ್ವಾಲಿಫೈಯರ್-2 (ಮುಂಬೈ)
ನವೆಂಬರ್ 3: ಕ್ವಾಲಿಫೈಯರ್-1Vs ಅಫ್ಘಾನಿಸ್ತಾನ (ಲಕ್ನೋ)
ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
ನವೆಂಬರ್ 6: ಬಾಂಗ್ಲಾದೇಶ Vs ಕ್ವಾಲಿಫೈಯರ್-2 (ದೆಹಲಿ)
ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
ನವೆಂಬರ್ 8: ಇಂಗ್ಲೆಂಡ್ Vs ಕ್ವಾಲಿಫೈಯರ್-1 (ಪುಣೆ)
ನವೆಂಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
ನವೆಂಬರ್ 11: ಭಾರತ Vs ಕ್ವಾಲಿಫೈಯರ್-1 (ಬೆಂಗಳೂರು)
ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
ನವೆಂಬರ್ 15: ಸೆಮಿಫೈನಲ್-1 (ಮುಂಬೈ)
ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
ನವೆಂಬರ್ 19: ಫೈನಲ್ (ಅಹ್ಮದಾಬಾದ್)

ICC World Cup 2023 schedule announced, India vs Pakistan match in Ahmedabad on October 15, here is complete details

Comments are closed.