ಸೋಮವಾರ, ಏಪ್ರಿಲ್ 28, 2025
HomebusinessBank KYC : ಕೆವೈಸಿ ಲಿಂಕ್ ಮಾಡದಿದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗಬಹುದು ಎಚ್ಚರ

Bank KYC : ಕೆವೈಸಿ ಲಿಂಕ್ ಮಾಡದಿದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗಬಹುದು ಎಚ್ಚರ

- Advertisement -

ಬ್ಯಾಂಕ್ ಖಾತೆಯನ್ನು ಹೊಂದಿರದವರು ಈಕಾಲದಲ್ಲಿ ಬಹುಶಃ ಯಾರೂ ಇಲ್ಲದಿರಬಹದು. ಪ್ರತಿಯೊಬ್ಬರೂ ತಮ್ಮ ವ್ಯಾವಹಾರಿಕ ವಹಿವಾಟು ಗಳಿಗಾಗಿ ಬ್ಯಾಂಕ್ ಖಾತೆ ಹೊಂದಿರಲೆಬೇಕು, ಅದು ಈಕಾಲದ ಅವಶ್ಯಕತೆ, ಅನಿವಾರ್ಯತೆಯೂ ಹೌದು. ಅಂದಹಾಗೆ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ನೀವೊಂದು ವಿಷಯವನ್ನು ತಿಳಿದು ಕೊಂಡಿರಲೇಬೇಕು. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಗ್ರಾಹಕರು ಕೆವೈಸಿ (ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ- KYC linked) ಪ್ರಕ್ರಿಯೆಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರೈಸದಿದ್ದರೆ ಅಂಥವರ ಖಾತೆ ಸ್ಥಗಿತಗೊಳ್ಳುವ ಸಂಭಾವ್ಯತೆಯಿದೆ. ನಿಷ್ಕ್ರಿಯಗೊಂಡ (Bank Account Freezed) ಖಾತೆಗಳಿಂದ ಹಣತೆಗೆಯುವುದು ಅಥವಾ ಜಮಾ ಮಾಡಲು ಆಗುವುದಿಲ್ಲ. ವೈಯಕ್ತಿಕ ಮತ್ತು ಸಂಸ್ಥೆಗಳ ಖಾತೆಗಳಿಗೆ ಇದು ಅನ್ವಯವಾಗಲಿವೆ ಎಂದು ವರದಿಯಾಗಿದೆ.

ಬ್ಯಾಂಕ್​ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲದ ಕಾರಣ ನಿಯಮ ಪಾಲನೆ ಮಾಡಿಲ್ಲ. ಹೀಗಾಗಿ ಆರ್‌ಬಿಐ ಈ ಹಿಂದೆಯೇ ಇಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಕಾರಣ ಇದನ್ನು ಮುಂದೂಡಿತ್ತು. ಆದರೀಗ ಡಿಸೆಂಬರ್‌ 31ರೊಳಗೆ ಕೆವೈಸಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಬ್ಯಾಂಕ್‌ಗಳಿಗೆ ನೀಡಿದೆ.

ಹಣಕಾಸು ವ್ಯವಹಾರದಲ್ಲಿ ಅಕ್ರಮಗಳನ್ನು ತಡೆಯಲು ಆರ್​ಬಿಐ ಈ ಕ್ರಮ ಕೈಗೊಂಡಿದೆ.  ಬೇನಾಮಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಯಂತಹ ಅಕ್ರಮಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶ ಆಗಿದೆ.

ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರು 10 ವರ್ಷಕ್ಕೆ ಒಮ್ಮೆ ಕೆವೈಸಿ ಮಾಹಿತಿಯನ್ನು ನವೀಕರಿಸಬೇಕು. ಹೆಚ್ಚಿನ ಮೊತ್ತದ ವಹಿವಾಟು ನಡೆಸುವವರನ್ನು ಹೈರಿಸ್ಕ್​ ಪ್ರೊಫೈಲ್‌ ಎಂದು ಪರಿಗಣಿಸಲಾಗುತ್ತದೆ. ಇಂಥ ಖಾತೆದಾರರು ಎರಡು ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ಸಲ್ಲಿಸಬೇಕು.

ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಶಾಖೆಗೆ ತೆರಳಿ ಅಥವಾ ಆನ್‌ಲೈನ್‌ ಮೂಲಕವೂ ಕೆವೈಸಿ ಪ್ರಕ್ರಿಯೆಯನ್ನು ಗ್ರಾಹಕರು ಪೂರ್ಣಗೊಳಿಸಬಹುದಾಗಿದೆ.

ಆದರೆ ಈಕುರಿತು ಸೈಬರ್ ಅಪರಾಧ ನಡೆಸುವವರು ಎಚ್ಚೆತ್ತುಕೊಂಡಿದ್ದಾರೆ. ಬ್ಯಾಂಕ್‌ಗಳು ಕೆವೈಸಿ ಪ್ರಕ್ರಿಯೆಗೆ ಸೂಚನೆ ನೀಡುತ್ತಿವೆ ಎಂಬುದನ್ನು ತಿಳಿದ ಸೈಬರ್‌ ಖದೀಮರು  ಹಣ ಲಪಟಾಯಿಸುವ ಉದ್ದೇಶದಿಂದ ಗ್ರಾಹಕರಿಂದ ದೂರವಾಣಿ ಮೂಲಕವೇ ಪಾಸ್​ವರ್ಡ್​, ಎಟಿಎಂ ಪಿನ್​, ಸಿವಿವಿ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಗ್ರಾಹಕರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: Bank Holidays January 2022 ರ ಜನವರಿ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 16 ದಿನ ರಜೆ

(Bank KYC : Account not KYC linked Banks will freeze it from January 2021)

RELATED ARTICLES

Most Popular