Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು

Rare Pink Fish : ಕೈಗಳಿಂದ ನಡೆದಾಡುವ ವಿಶೇಷ ವಾಕಿಂಗ್​ ಮೀನನ್ನು ಆಸ್ಟ್ರೇಲಿಯಾದ ಟ್ಯಾಸ್ಮೇನಿಯಾ ಕರಾವಳಿ ಪ್ರದೇಶದಲ್ಲಿ ಬರೋಬ್ಬರಿ 22 ವರ್ಷಗಳ ಬಳಿಕ ಗುರುತಿಸಲಾಗಿದೆ. ಆಸ್ಟ್ರೇಲಿಯಾ ಕರಾವಳಿ ಮೂಲದ ಈ ಮೀನನ್ನು ಕೇವಲ ನಾಲ್ಕು ಬಾರಿ ಮಾತ್ರ ಗುರುತಿಸಲಾಗಿದೆ. 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಡೈವರ್​ ಒಬ್ಬರು ಕೊನೆಯ ಬಾರಿಗೆ ಈ ಮೀನನ್ನು ಪತ್ತೆ ಮಾಡಿದ್ದರು.

ಹೆಸರೇ ಹೇಳುವಂತೆ ಈ ವಾಕಿಂಗ್​ ಫಿಶ್​​ ಉಳಿದ ಮೀನುಗಳಿಗಿಂತ ವಿಭಿನ್ನವಾಗಿದೆ. ಇದು ದೊಡ್ಡ ಕೈಗಳನ್ನು ಹೊಂದಿದ್ದು ಈ ಕೈಗಳ ಸಹಾಯದಿಂದ ಈಜುವುದು ಮಾತ್ರವಲ್ಲದೇ ನಡೆದಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮೀನು ಅಳಿವಿನಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ಮರೈನ್​ ಪಾರ್ಕ್​ನ ಆಳ ಸಮುದ್ರದಲ್ಲಿ ಇಡಲಾದ ಕ್ಯಾಮರಾ ಕಣ್ಣಲ್ಲಿ ಗುಲಾಬಿ ಮೀನಿನ ಚಲನವಲನಗಳು ಸೆರೆಯಾಗಿದೆ. ಈ ಮೊದಲು ಹ್ಯಾಂಡ್​ ಫಿಶ್​ ಕೇವಲ ಆಳವಿಲ್ಲದ ನೀರಿನಲ್ಲಿ ಮಾತ್ರ ವಾಸಿಸುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಹೊಸ ಇದೀಗ ಸಿಕ್ಕಿರುವ ಫೂಟೇಜ್​ನ ಪ್ರಕಾರ ಹ್ಯಾಂಡ್​ ಫಿಶ್​​ ಬರೋಬ್ಬರಿ 390 ಅಡಿ ಆಳದ ನೀರಿನಲ್ಲೂ ವಾಸವಿರಬಲ್ಲದು ಎಂದು ತಿಳಿದುಬಂದಿದೆ.

ಬಿಬಿಸಿಯ ಪ್ರಮುಖ ಸಂಶೋಧಕ ಹಾಗೂ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ನೆವಿಲ್ಲೆ ಬ್ಯಾರೆಟ್​​​ ವಾಕಿಂಗ್​ ಫಿಶ್​ ಕಾಣಿಸಿಕೊಂಡಿರುವುದು ನಮ್ಮ ಅಳಿವಿನಂಚಿನಲ್ಲಿ ಇರುವ ಜೀವಿಗಳ ಉಳಿವಿನ ಭರವಸೆಯನ್ನು ನೀಡುತ್ತಿದೆ. ಸಂಶೋಧಕರ ತಂಡವು ಟ್ಯಾಸ್ಮನ್​​ ಫ್ರಾಕ್ಚರ್​​ ಮರೈನ್​​ ಪಾರ್ಕ್​ನಲ್ಲಿ ಕ್ಯಾಮರಾಗಳನ್ನು ಇರಿಸಲಾಗಿತ್ತು. ಈ ಕ್ಯಾಮರಾಗಳ ಮೂಲಕ ಹ್ಯಾಂಡ್​ಫಿಶ್​​ನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

ಇದನ್ನೂ ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

ಇದನ್ನೂ ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!

ಇದನ್ನೂ ಓದಿ : man climbs atop electricity tower : ಸಿಹಿತಿಂಡಿ ಬೇಕೆಂದು ವಿದ್ಯುತ್​ ಕಂಬವನ್ನೇರಿ ವ್ಯಕ್ತಿಯ ಹುಚ್ಚಾಟ..!

Rare Pink Fish That ‘Walks’ on Hands Found in Australia After 22 Years

Comments are closed.