ಯಾವುದಕ್ಕೂ ಒಮ್ಮೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡ್ಕೊಳ್ಳಿ..! ನಿಮಗೆ ಗೊತ್ತೆ ಇಲ್ಲದಂತೆ ಮಾಯವಾಗ್ತಿದೆ ಖಾತೆಯಲ್ಲಿರುವ ಹಣ ..!!

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚಕರ ಜಾಲ ಹೆಚ್ಚುತ್ತಲೇ ಇದೆ. ಇದೀಗ ವಂಚಕರು ನಿಮ್ಮ ಬ್ಯಾಂಕ್ ಖಾತೆಯ ಮೇಲೂ ಕಣ್ಣಿಟ್ಟಿದ್ದಾರೆ. ನಿಮ್ಮ ಅರಿವಿಗೆ ಬಾರದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಗರಿಸಿ ಬಿಡುತ್ತಿದ್ದಾರೆ.
ಹೌದು, ಬಂದರು ನಗರಿ ಮಂಗಳೂರಲ್ಲಿ ಇಂತಹದ್ದೇ ಹಲವು ಪ್ರಕರಣಗಳು ನಡೆಯುತ್ತಿದೆ. ಇದೀಗ ಹಣ ಕಳೆದುಕೊಂಡಿರುವ ಇಬ್ಬರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕಂಪಾಡಿಯ ನಿವಾಸಿ ದಯಾನಂದ ಎಂಬವರು ಯೂನಿಯನ್ ಬ್ಯಾಂಕ್ ಬೈಕಂಪಾಡಿ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರು. ಇವರ ಖಾತೆಯಿಂದ 20 ಸಾವಿರ ರೂಪಾಯಿ ವಿತ್ ಡ್ರಾ ಮಾಡಲಾಗಿತ್ತು. ಇನ್ನೊಂದೆಡೆ ಜಾನೆಟ್ ಡಿಸೋಜಾ ಎಂಬವರು ಕೆನರಾ ಬ್ಯಾಂಕ್ ಬಲ್ಮಠ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಇವರ ಖಾತೆಯಿಂದಲೂ 40 ಸಾವಿರ ರೂಪಾಯಿ ಡ್ರಾ ಮಾಡಲಾಗಿದೆ.

ಎರಡೂ ಖಾತೆಯಿಂದ ಬರೋಬ್ಬರಿ 60 ಸಾವಿರ ವಿತ್ ಡ್ರಾ ಆಗಿರೋದು ಗಮನಕ್ಕೆ ಬರುತ್ತಿದ್ದಂತೆಯೇ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಇದೀಗ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕುಗಳ ವಿಲೀನದ ನಂತರದಲ್ಲಿ ಹಲವು ಗ್ರಾಹಕರ ಖಾತೆಯಲ್ಲಿ ಹಣ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಹಲವರ ಖಾತೆಯ ನಾಮಿನಿ ಕೂಡ ಅದಲು ಬದಲಾಗಿತ್ತು.

ಇದೀಗ ಮಂಗಳೂರಲ್ಲಿ ಖಾತೆಯಲ್ಲಿದ್ದ ಇಷ್ಟೊಂದು ದೊಡ್ಡ ಮೊತ್ತದ ಹಣ ವಿಥ್ ಡ್ರಾ ಆಗಿರೋದು ಆತಂಕ ಮೂಡಿಸಿದೆ. ಯಾವುದಕ್ಕೂ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಒಮ್ಮೆ ಚೆಕ್ ಮಾಡಿಕೊಳ್ಳುವುದು ಒಳಿತು. ಇಲ್ಲವಾದ್ರೆ ನಿಮ್ಮ ಖಾತೆಯಲ್ಲಿನ ಹಣ ನಾಪತ್ತೆಯಾದ್ರೂ ಆಶ್ಚರ್ಯ ಪಡಬೇಕಿಲ್ಲ.

Comments are closed.